ಟೀಕೆಗಳನ್ನು ಎದುರಿಸಿ: ಮಾನಹಾನಿ ಪ್ರಕರಣಗಳ ಬಗ್ಗೆ ಜಯಲಲಿತಾಗೆ ಸುಪ್ರೀಂ ಕೋರ್ಟ್ ತರಾಟೆ

ಮಾನಹಾನಿ ಪ್ರಕರಣಗಳನ್ನು ಸ್ವಂತಕ್ಕೆ ದುರ್ಬಳಿಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪದ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ
ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ
ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ
ನವದೆಹಲಿ: ಮಾನಹಾನಿ ಪ್ರಕರಣಗಳನ್ನು ಸ್ವಂತಕ್ಕೆ ದುರ್ಬಳಿಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪದ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್, ಸಾರ್ವಜನಿಕ ವ್ಯಕ್ತಿಯಾಗಿ ಟೀಕೆಗಳನ್ನು ಎದುರಿಸಲು ಕಲಿಯಿರಿ ಎಂದು ಬುಧವಾರ ಹೇಳಿದ್ದು, ಎಲ್ಲ ಸಮಯದಲ್ಲೂ ಮಾನಹಾನಿ ಪ್ರಕರಣಗಳನ್ನು ದಾಖಲಿಯುವುದು ಸರಿಯಲ್ಲ ಎಂದಿದೆ. 
ಮಾನಹಾನಿ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ವಿಷಯದಲ್ಲಿ ಜಯಲಲಿತಾ ಅವರಿಗೆ ಸುಪ್ರೀಂ ಕೋರ್ಟ್ ಮತ್ತೆ ನೋಟಿಸ್ ನೀಡಿದೆ. 
"ಎಲ್ಲ ಸಮಯದಲ್ಲಿ ಮಾನಹಾನಿ ಪ್ರಕರಣ ದಾಖಲು ಮಾಡಲು ಬರುವುದಿಲ್ಲ. ಆರೋಗ್ಯಕರ ಪ್ರಜಾಪ್ರಭುತ್ವ ಕಾರ್ಯನಿರ್ವಹಿಸುವ ಸರಿಯಾದ ಮಾರ್ಗ ಇದಲ್ಲ. ಮಾನಹಾನಿಯ ಸಾರ್ವಜನಿಕ ನಡವಳಿಕೆಯನ್ನು ರಾಜ್ಯ ನಿಯಂತ್ರಿಸುತ್ತದೆ. ಇಂತಹ ಪ್ರಕರಣಗಳನ್ನು ಹೂಡುವಾಗ ನೀವು (ಜಯಲಲಿತಾ) ಸ್ವಲ್ಪ ನಿಯಂತ್ರಣ ಹೇರಿಕೊಳ್ಳಬೇಕು" ಎಂದು ಕೋರ್ಟ್ ಗಮನಿಸಿದೆ. 
"ಸಾರ್ವಜನಿಕ ನೀತಿಗಳನ್ನು ಟೀಕಿಸುವುದನ್ನು ಮಾನಹಾನಿ ಎನ್ನಲು ಬರುವುದಿಲ್ಲ. ಮುಖಮಂತ್ರಿಯವರ ಆರೋಗ್ಯ ಸ್ಥಿತಿಯನ್ನು ವರದಿ ಮಾಡುವುದಕ್ಕೂ ಮಾನಹಾನಿ ಪ್ರಕರಣ ಹಾಕುವುದಕ್ಕೆ ಬರುವುದಿಲ್ಲ" ಎಂದು ಕೋರ್ಟ್ ಗಮನಿಸಿದೆ. 
ತಮಿಳುನಾಡು ಸರ್ಕಾರ ದುರ್ಬಳಕೆ ಮಾಡಿರುವುಷ್ಟು ಮಾನಹಾನಿ ಕಾನೂನನ್ನು ಬೇರೆ ಯಾವ ರಾಜ್ಯಗಳು ಮಾಡಿಲ್ಲ ಎಂದು ಕೂಡ ಅಪೆಕ್ಸ್ ನ್ಯಾಯಾಲಯ ಹೇಳಿದೆ. 
ರಾಜ್ಯ ಸರ್ಕಾರ ತಮ್ಮ ವಿರುದ್ಧ ಹೂಡಿರುವ ಮಾನಹಾನಿ ಪ್ರಕರಣಗಳನ್ನು ವಜಾ ಮಾಡುವಂತೆ ಕೋರಿದ್ದ ನಟ-ರಾಜಕಾರಣಿ ಡಿಎಂಡಿಕೆ ಮುಖಂಡ ವಿಜಯಕಾಂತ್ ಅವರ ಅರ್ಜಿ ಆಲಿಸುವಾಗ ಸುಪ್ರೀಂ ಕೋರ್ಟ್ ಹೀಗೆ ಹೇಳಿದೆ. 
ಸಾರ್ವಜನಿಕ ಕಚೇರಿಯನ್ನು ದುರ್ಬಳಕೆ ಮಾಡಿಕೊಂಡಿರುವ ವಿಚಾರವಾಗಿ ಸೆಪ್ಟೆಂಬರ್ 22 ಕ್ಕೆ ಕೋರ್ಟ್ ಅರ್ಜಿ ಆಲಿಸಲಿದೆ. 
ಜಯಲಲಿತಾ ಅಥವಾ ಅವರ ಸರ್ಕಾರವನ್ನು ಟೀಕಿಸಿದ್ದಕ್ಕೆ ಮಾನಹಾನಿ ಪ್ರಕರಣಗಳನ್ನು ಹಾಕಿದ್ದ ಸಂಪೂರ್ಣ ಪಟ್ಟಿ ಒದಗಿಸುವಂತೆ ಈ ಹಿಂದೆ ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. 
ಸರ್ಕಾರವನ್ನು ಟೀಕಿಸಿದ್ದಕ್ಕೆ ವಿಜಯಕಾಂತ್ ಒಬ್ಬರ ವಿರುದ್ಧವೇ 14 ಮಾನಹಾನಿ ಪ್ರಕರಣಗಳು ದಾಖಲಾಗಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com