ಹೈದರಾಬಾದ್ ನಲ್ಲಿ ಹಸುಗೂಸುಗಳು ಅದಲು ಬದಲು ಆರೋಪ; ಡಿ ಎನ್ ಎ ಪರೀಕ್ಷೆಗೆ ಆದೇಶ

ಹೈದರಾಬಾದ್ ಕೋಟಿ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಗಂಡುಮಗುವಿಗಾಗಿ ಎರಡು ಕುಟುಂಬಗಳು ಹಕ್ಕುಸಾಧಿಸಿವೆ. ನಮ್ಮ ಗಂಡು ಮಗುವನ್ನು ಹೆಣ್ಣು ಮಗುವೊಂದರ ಜೊತೆಗೆ ಅದಲು ಬದಲಿ ಮಾಡಿದ್ದಾರೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಹೈದರಾಬಾದ್: ಹೈದರಾಬಾದ್ ಕೋಟಿ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಗಂಡುಮಗುವಿಗಾಗಿ ಎರಡು ಕುಟುಂಬಗಳು ಹಕ್ಕುಸಾಧಿಸಿವೆ. ನಮ್ಮ ಗಂಡು ಮಗುವನ್ನು ಹೆಣ್ಣು ಮಗುವೊಂದರ ಜೊತೆಗೆ ಅದಲು ಬದಲಿ ಮಾಡಿದ್ದಾರೆ ಆಸ್ಪತ್ರೆ ಸಿಬ್ಬಂದಿ ಎಂದು ಜೋಡಿ ದೂರಿರುವುದರಿಂದ ಸತ್ಯ ಪತ್ತೆಹಚ್ಚಲು ಪೊಲೀಸರು ಡಿ ಎನ್ ಎ ಪರೀಕ್ಷೆಗೆ ಆಗ್ರಹಿಸಿದ್ದಾರೆ. 
ತನ್ನ ಪತ್ನಿ ರಜಿತಾಗೆ ಗಂಡು ಮಗು ಹುಟ್ಟಿದ್ದು, ಆಸ್ಪತ್ರೆ ಸಿಬ್ಬಂದಿ ಆ ಮಗುವನ್ನು ಹೆಣ್ಣುಮಗುವಿನೊಂದಿಗೆ ಬದಲಿಸಿದ್ದಾರೆ ಎಂದು ಶತ್ರು ಬಾಬು ದೂರು ನೀಡಿದ್ದಾರೆ ಎಂದು ಸುಲ್ತಾನ್ ಬಜಾರ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪಿ ಶಿವ ಶಂಕರ್ ರಾವ್ ತಿಳಿಸಿದ್ದಾರೆ. 
ಆದರೆ ಇದನ್ನು ಅಲ್ಲಗೆಳೆದಿರುವ ಆಸ್ಪತ್ರಗೆ ಅಧಿಕಾರಿಗಳು ರಜಿತಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿರುವುದು ಮತ್ತು ಮತ್ತೊಬ್ಬ ಮಹಿಳೆ (ರಮಾದೇವಿ ಎಂದು ಗುರ್ತಿಸಲಾಗಿದೆ) ಅದೇ ಸಮಯದಲ್ಲಿ -ನಾಲ್ಕು ನಿಮಿಷಗಳ ಅಂತರದಲ್ಲಿ ಗಂಡು ಮಗುವೊಂದಕ್ಕೆ ಜನ್ಮ ನೀಡಿದರು ಎಂದು ಹೇಳಿದ್ದಾರೆ. 
ಇಬ್ಬರು ಮಹಿಳೆಯರು ಸಿಸೇರಿಯನ್ ಶಾಸ್ತ್ರಚಿಕೆತ್ಸೆಯ ನಂತರ ಜನ್ಮ ನೀಡಿದ್ದು, ಒಂದೇ ಸಮಯದಲ್ಲಿ ಹುಟ್ಟಿದ್ದರಿಂದ ಗೊಂದಲವುಂಟಾಗಿ ರಜಿತಾ ಗಂಡು ಮಗುವನ್ನು ಎತ್ತಿಕೊಂಡು ಹೋದರು ಎಂದು ತಿಳಿಸುವ ವೈದ್ಯರು "ರಜಿತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಎಂದು ವಿವರಿಸಲು ಪ್ರಯತ್ನಿಸಿದೆವು. ಆದರೆ ಅವರು ನಮ್ಮ ಮಾತು ಕೇಳಲು ಸಿದ್ಧರಿರಲಿಲ್ಲ. ಆದುದರಿಂದ ಡಿ ಎನ್ ಎ ಪರೀಕ್ಷೆ ಮಾಡಬೇಕಾಯಿತು" ಎಂದಿದ್ದಾರೆ. 
ಎರಡೂ ಮಕ್ಕಳು ಆರೋಗ್ಯವಾಗಿದ್ದು, ಸರಿಯಾಗಿ ಆಹಾರ ಸೇವಿಸುತ್ತಿವೆ ಎಂದು ಆಸ್ಪತ್ರೆ ಸೂಪರಿಂಡೆಂಟ್ ವಿ ರತ್ನ ಕುಮಾರ್ ಹೇಳಿದ್ದಾರೆ. ರಾಮಾದೇವಿಯರು ಪೊಲೀಸ್ ದೂರು ನೀಡಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com