ಕನ್ಹಯ್ಯ ಮತ್ತಿಬ್ಬರಿಗೆ ದೇಶದ್ರೋಹ ಪ್ರಕರಣದಲ್ಲಿ ಸಾಮಾನ್ಯ ಜಾಮೀನು

ಜವಾಹರ್ ನೆಹರು ವಿಶ್ವವಿದ್ಯಾಲಯದಲ್ಲಿ ದೇಶವಿರೋಧಿ ಘೋಷಣೆ ಆರೋಪದ ಎದುರಿಸುತ್ತಿರುವ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ್ಯ ಕುಮಾರ್ ಮತ್ತು ಇತರ ಇಬ್ಬರು ವಿದ್ಯಾರ್ಥಿಗಳಿಗೆ ದೆಹಲಿ ಹೈಕೋರ್ಟ್
ಜೆ ಎನ್ ಯು ಎಸ್ ಯು ಅಧ್ಯಕ್ಷ ಕನ್ಹಯ್ಯ ಕುಮಾರ್
ಜೆ ಎನ್ ಯು ಎಸ್ ಯು ಅಧ್ಯಕ್ಷ ಕನ್ಹಯ್ಯ ಕುಮಾರ್
ನವದೆಹಲಿ: ಜವಾಹರ್ ನೆಹರು ವಿಶ್ವವಿದ್ಯಾಲಯದಲ್ಲಿ ದೇಶವಿರೋಧಿ ಘೋಷಣೆ ಆರೋಪದ ಎದುರಿಸುತ್ತಿರುವ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ್ಯ ಕುಮಾರ್ ಮತ್ತು ಇತರ ಇಬ್ಬರು ವಿದ್ಯಾರ್ಥಿಗಳಿಗೆ ದೆಹಲಿ ಹೈಕೋರ್ಟ್ ಸಾಮಾನ್ಯ ಜಾಮೀನು ನೀಡಿದ್ದು, ಜಾಮೀನು ನಿರಾಕರಿಸುವುದಕ್ಕೆ ಬೇರೆ ಯಾವುದೇ ಕಾರಣಗಳಿಲ್ಲ ಎಂದು ಗಮನಿಸಿದೆ. 
ಕನ್ಹಯ್ಯ ಮತ್ತು ಇಬ್ಬರು ವಿದ್ಯಾರ್ಥಿಗಳು - ಉಮರ್ ಖಲೀದ್ ಹಾಗು ಅನಿರ್ಬಾನ್ ಭಟ್ಟಾಚಾರ್ಯ ಅವರಿಗೆ ದೊರೆತಿದ್ದ ಮಧ್ಯಂತರ ಜಾಮೀನನ್ನು ಯಾವುದೇ ರೀತಿಯಲ್ಲಿ ದುರ್ಬಳಕೆ ಮಾಡಿಕೊಳ್ಳದೆ ಪ್ರಕರಣದ ತನಿಖೆಗೆ ಸಹಕಾರ ನೀಡಿದ್ದಾರೆ ಎಂದು ದೆಹಲಿ ಪೊಲೀಸರು ಕೋರ್ಟ್ ಗೆ ತಿಳಿಸಿದ್ದರು. 
"ಈ ಮೂವರು ಆಪಾದಿತರಿಗೂ ಮಧ್ಯಂತರ ಜಾಮೀನು ದೊರೆತಿದ್ದು, ತನಿಖೆಗೆ ಕರೆದಾಗಲೆಲ್ಲಾ ಹಾಜರಾಗಿರುವುದರಿಂದ, ಮಧ್ಯಂತರ ಜಾನೀನು ನೀಡುವಾಗ ಹಾಕಿದ್ದ ನಿಯಮ ಮತ್ತು ನಿರ್ಬಂಧನೆಗಳ ಮೇರೆಗೆ ಕನ್ಹಯ್ಯ ಕುಮಾರ್, ಉಮರ್ ಖಲೀದ್ ಮತ್ತು ಅನಿರ್ಬಾನ್ ಭಟ್ಟಾಚಾರ್ಯ ಅವರಿಗೆ ಸಾಮಾನ್ಯ ಜಾಮೀನು ನೀಡುತ್ತಿದ್ದೇನೆ.
"ಆಪಾದಿತರು ಮಧ್ಯಂತರ ಜಾಮೀನು ನೀಡುವಾಗಲೇ ಬಾಂಡ್ ನೀಡಿದ್ದಾರೆ. ಮುಂದಿನ ಆದೇಶದವೆರೆಗೂ ಅದೇ ಬಾಂಡ್ ಊರ್ಜಿತವಾಗಿರುತ್ತದೆ" ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರೀತೇಶ್ ಸಿಂಗ್ ತಮ್ಮ ಆದೇಶದಲ್ಲಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com