ನವದೆಹಲಿ: ಬುಲಂದ್ಶಹರ್ ಗ್ಯಾಂಗ್ ರೇಪ್ ತನಿಖೆಯನ್ನು ರಾಜ್ಯ ಪೊಲೀಸರಿಂದ ಹಸ್ತಾಂತರಿಸುವ ಮನವಿ ಬಗ್ಗೆ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರ್ಕಾರದಿಂದ ಸೋಮವಾರ ಪ್ರತಿಕ್ರಿಯೆ ಕೇಳಿದೆ.
ರೇಪ್ ಗೆ ಒಳಗಾದ ಅಪ್ರಾಪ್ತ ಬಾಲಕಿ ತಂದೆ ಸಲ್ಲಿಸಿರುವ ಅರ್ಜಿ ವಿಚಾರಣೆ ಮಾಡಿದ ನ್ಯಾಯಾಧೀಶ ದೀಪಕ್ ಮಿಶ್ರಾ ಮತ್ತು ನ್ಯಾಯಾಧೀಶ ವಿ ನಾಗಪ್ಪನ್ ಈ ವಿಷಯದಲ್ಲಿ ನ್ಯಾಯಾಲಯಕ್ಕೆ ಸಹಾಯ ಮಾಡಲು ಹಿರಿಯ ವಕೀಲ ಫಾಲಿ ನಾರಿಮನ್ ಅವರನ್ನು ಅಮಿಕಸ್ ಕ್ಯುರೆ ಆಗಿ ನೇಮಿಸಿದೆ.
ತನಿಖೆಯನ್ನು ಉತ್ತರಪ್ರದೇಶ ಪೊಲೀಸರಿಂದ್ ಹಸ್ತಾಂತರಿಸುವುದಲ್ಲದೆ ಅದನ್ನು ಕೋರ್ಟ್ ಪರಿವೀಕ್ಷಣೆ ಕೂಡ ಮಾಡಬೇಕೆಂದು ಮನವಿಯಲ್ಲಿ ಕೇಳಿಕೊಳ್ಳಲಾಗಿದೆ.
ಈ ಗ್ಯಾಂಗ್ ರೇಪ್ ಆರೋಪ ರಾಜಕೀಯ ಪಿತೂರಿ ಎಂದಿದ್ದ ಉತ್ತರ ಪ್ರದೇಶ ನಗರಾಭಿವೃದ್ಧಿ ಸಚಿವ ಅಜಂ ಖಾನ್ ವಿರುದ್ಧ ಎಫ್ ಐ ಆರ್ ದಾಖಲಿಸಬೇಕು ಎಂದು ಕೂಡ ಕೋರಿದ್ದ ಮನವಿಯನ್ನು ವಿಚಾರಿಸಿ ಸಚಿವರಿಗೆ ಕೂಡ ನೋಟಿಸ್ ನೀಡಲಾಗಿದೆ.
ಜುಲೈ 29 ರಂದು ಷಹಜಹಾನ್ಪುರಕ್ಕೆ ತೆರಳುವ ಸಮಯದಲ್ಲಿ ಅಪ್ರಾಪ್ತ ಬಾಲಕಿ ಮತ್ತು ಅವರ ತಾಯಿಯನ್ನು, ಅರ್ಜಿದಾರನ ಸಮ್ಮುಖದಲ್ಲಿಯೇ ರೇಪ್ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು.