ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಸಬ್ಸಿಡಿ ಸಹಿತ ಎಲ್ ಪಿ ಜಿ 2 ರೂ ಹೆಚ್ಚಳ; ಜೆಟ್ ಇಂಧನ 3.8% ಕಡಿತ

ಅಡುಗೆ ಅನಿಲ ಅಥವಾ ಸಬ್ಸಿಡಿ ಸಹಿತ ಎಲ್ ಪಿ ಜಿ 14.2 ಕೆಜಿ ಸಿಲಿಂಡರ್ ಗುರುವಾರದಿಂದ 2 ರೂ ಹೆಚ್ಚಳಗೊಂಡಿದ್ದು, ಸಬ್ಸಿಡಿ ರಹಿತ ಎಲ್ ಪಿ ಜಿ ಸಿಲಿಂಡರ್ ಬೆಲೆ 20.5 ರೂ ಕಡಿತಗೊಳ್ಳಲಿದೆ.
ನವದೆಹಲಿ: ಅಡುಗೆ ಅನಿಲ ಅಥವಾ ಸಬ್ಸಿಡಿ ಸಹಿತ ಎಲ್ ಪಿ ಜಿ 14.2 ಕೆಜಿ ಸಿಲಿಂಡರ್ ಗುರುವಾರದಿಂದ 2 ರೂ ಹೆಚ್ಚಳಗೊಂಡಿದ್ದು, ಸಬ್ಸಿಡಿ ರಹಿತ ಎಲ್ ಪಿ ಜಿ ಸಿಲಿಂಡರ್ ಬೆಲೆ 20.5 ರೂ ಕಡಿತಗೊಳ್ಳಲಿದೆ. 
ಜುಲೈನಿಂದ ಸಬ್ಸಿಡಿ ಸಹಿತ ಎಲ್ ಪಿ ಜಿ ಸಿಲಿಂಡರ್ ಬೆಲೆ ಈಗ ಮೂರನೇ ಬಾರಿಗೆ ಹೆಚ್ಚಳಗೊಂಡಿದ್ದು, ದೆಹಲಿಯಲ್ಲಿ 423.09 ರೂ ಇದ್ದ ಸಿಲಿಂಡರ್ ಬೆಲೆ ಈಗ 425.06 ರೂಗೆ ಏರಿದೆ. 
ಪ್ರತಿ ತಿಂಗಳು ಸಣ್ಣ ಸಣ್ಣ ಕಂತಿನಲ್ಲಿ ದರ ಹೆಚ್ಚಳ ಮಾಡಿ ಸಬ್ಸಿಡಿಯನ್ನು ಕಡಿಮೆ ಮಾಡುವ ಸರ್ಕಾರದ ಕಾರ್ಯತಂತ್ರದ ಭಾಗವಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ. 
ಎಲ್ ಪಿ ಜಿ ಸಿಲಿಂಡರ್ ಬೆಲೆ ಜುಲೈ 1 ರಂದು 1.98 ರೂ ಮತ್ತು ಆಗಸ್ಟ್ 16 ರಂದು 1.93 ರೂ ಹೆಚ್ಚಳಗೊಂಡಿತ್ತು. 
12 ಸಬ್ಸಿಡಿ ಸಿಲಿಂಡರ್ ಗಳ ಕೋಟ ಮುಗಿದ ಮೇಲೆ ಕೊಳ್ಳಬೇಕಾಗಿರುವ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ದೆಹಲಿಯಲ್ಲಿ 487 ರೂ ನಿಂದ 466.50 ರೂಗಳಿಗೆ ಇಳಿದಿದೆ. 
ಹಾಗೆಯೇ ಜೆಟ್ ಇಂಧನದ ಬೆಲೆಯನ್ನು 3.8% ಕಡಿತಗೊಂಡಿದ್ದು, ಒಂದು ಕಿಲೋಲೀಟರ್ ಇಂಧನಕ್ಕೆ 1795.5 ರೂ ಕಡಿತಗೊಳ್ಳಲಿದೆ. ಆಗಸ್ಟ್ 1 ರಂದು ಕೂಡ ಇದರ ಬೆಲೆಯನ್ನು 4.2% ಕಡಿತಗೊಳಿಸಲಾಗಿತ್ತು. 

Related Stories

No stories found.

Advertisement

X
Kannada Prabha
www.kannadaprabha.com