ಜಯಲಲಿತಾ ಸ್ಥಿತಿ ತೀವ್ರ ಚಿಂತಾಜನಕ: ಲಂಡನ್ ವೈದ್ಯ ರಿಚರ್ಡ್ ಬಿಯಲ್

ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಸ್ಥಿತಿ "ತೀವ್ರ ಚಿಂತಾಜನಕವಾಗಿದೆ" ಎಂದು ಇಲ್ಲಿನ ವೈದ್ಯರುಗಳಿಗೆ ಸಲಹೆ ನೀಡುತ್ತಿರುವ ಲಂಡನ್ ಮೂಲದ ವೈದ್ಯ ರಿಚರ್ಡ್ ಬಿಯಲ್...
ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ
ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ
Updated on
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಸ್ಥಿತಿ "ತೀವ್ರ ಚಿಂತಾಜನಕವಾಗಿದೆ" ಎಂದು ಇಲ್ಲಿನ ವೈದ್ಯರುಗಳಿಗೆ ಸಲಹೆ ನೀಡುತ್ತಿರುವ ಲಂಡನ್ ಮೂಲದ ವೈದ್ಯ ರಿಚರ್ಡ್ ಬಿಯಲ್ ಸೋಮವಾರ ಹೇಳಿದ್ದಾರೆ. 
"ಪರಿಸ್ಥಿತಿ ತೀವ್ರ ಚಿಂತಾಜನಕವಾಗಿದೆ ಆದರೆ ಅವರು ಉಳಿದುಕೊಳ್ಳಲು ಉತ್ತಮ ಅವಕಾಶ ದೊರೆಯುವಂತೆ ಎಲ್ಲವನ್ನು ಮಾಡುತ್ತಿದ್ದೇವೆ ಎಂದು ಧೃಢೀಕರಿಸುತ್ತೇನೆ" ಎಂದು ರಿಚರ್ಡ್ ಬಿಯಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. 
ಸೆಪ್ಟೆಂಬರ್ ನಲ್ಲಿ ಅಪೊಲೊ ಆಸ್ಪತ್ರೆಗೆ ಜಯಲಲಿತಾ ಅವರು ದಾಖಲಾದಾಗಿಲಿಂದಲೂ, ಲಂಡನ್ ಬ್ರಿಜ್ ಆಸ್ಪತ್ರೆಯ ವೈದ್ಯ ಬಿಯಲ್ ಅವರನ್ನು ಅಪೋಲೋ ವೈದ್ಯರು ನಿರಂತರವಾಗಿ ಸಂಪರ್ಕಿಸುತ್ತಿದ್ದಾರೆ. 
ಸಂಪೂರ್ಣ ಹೇಳಿಕೆ 

ಮೇಡಂ ಮುಖ್ಯಮಂತ್ರಿ ಅವರು ನೆನ್ನೆ (ಭಾನುವಾರ) ತುರ್ತು ಹೃದಯ ಸ್ತಂಭನದಿಂದ ನರಳಿದ್ದನ್ನು ಕೇಳಿ ಅತೀವ ದುಃಖವಾಯಿತು. ಅಪೊಲೊದಲ್ಲಿ ಅವರ ಸ್ಥಿತಿಯ ಬಗ್ಗೆ  ನಾನು ನಿಕಟವಾಗಿ ಗಮನಿಸುತ್ತಿದ್ದೇನೆ ಮತ್ತು ಎಲ್ಲರಂತೆಯೇ ಅವರು ಗುಣಮುಖರಾಗುತ್ತಿದ್ದ ಬಗ್ಗೆ ಸ್ಫುರ್ತಿಯಿಂದಿದ್ದೆ. 

ಅವರು ಗುಣಮುಖರಾದ ನಡುವೆಯೂ ದುರದೃಷ್ಟವಶಾತ್ ಅವರ ಆರೋಗ್ಯ ಸ್ಥಿತಿ ಅಪಾಯದಿಂದಲೇ ಕೂಡಿತ್ತು ಮತ್ತು ಮುಂದಿನ ತೊಂದರೆಗಳು ಉಳಿದುಕೊಂಡಿದ್ದವು. ಪರಿಸ್ಥಿತಿ ತೀವ್ರ ಚಿಂತಾಜನಕವಾಗಿದೆ ಆದರೆ ಇಂತಹ ಆಘಾತಕಾರಿ ಘಟನೆಯಿಂದ ಅವರು ಉಳಿದುಕೊಳ್ಳಲು ಉತ್ತಮ ಅವಕಾಶ ದೊರೆಯುವಂತೆ ಎಲ್ಲವನ್ನು ಮಾಡುತ್ತಿದ್ದೇವೆ ಎಂದು ಧೃಢೀಕರಿಸುತ್ತೇನೆ.

ಅವರಿಗೆ ಹಲವು ವಿಭಾಗಗಳ ತಜ್ಞರು ಚಿಕಿತ್ಸೆ ನೀಡುತ್ತಿದ್ದಾರೆ, ಮತ್ತು ಈಗ ಈ ಸಿ ಎಂ ಒ ಮೂಲಕ ಅವರ ಜೀವವನ್ನು ಸಹಕರಿಸಲಾಗಿದೆ. ಇದು ಲಭ್ಯವಿರುವ ಅತ್ಯಾಧುನಿಕ ಜೀವ ಸಹಕಾರ ಉಪಕರಣ ಮತ್ತು ಇಂತಹ ಪರಿಸ್ಥಿಯಲ್ಲಿ ಅಂತಾರಾಷ್ಟ್ರೀಯ ಆರೋಗ್ಯ ಕೇಂದ್ರಗಳು ತೆಗೆದುಕೊಳ್ಳುವ ಅತ್ಯುತ್ತಮ ನಿರ್ಧಾರ ಇದು. ಈ ತಂತ್ರಜ್ಞಾನ ಅಪೋಲೋ ಚೆನ್ನೈ ಕೇಂದ್ರದಲ್ಲಿ ಇರುವುದು, ಇದು ಅಲ್ಲಿ ಅತ್ಯುತ್ತಮ ಸೌಲಭ್ಯ ಇರುವುದನ್ನು ಪ್ರತಿನಿಧಿಸುತ್ತದೆ, ಮೇಡಂ ಅವರಿಗೆ ಅಪೋಲೋ ಮತ್ತು ಎ ಐ ಐ ಎಂ ಎಸ್ ತಂಡಗಳಿಂದ ಅತ್ಯುತ್ತಮ ಚಿಕಿತ್ಸೆ ದೊರೆತಿದೆ, ಇದು ವಿಶ್ವದೆಲ್ಲೆಡೆ ದೊರಕುವ ಅತ್ಯುತ್ತಮ ಚಿಕಿತ್ಸೆಗೆ ಸಮ. 

ಈ ಕಷ್ಟದ ಸಮಯದಲ್ಲಿ ಮೇಡಂ, ಅವರ ಕುಟುಂಬ, ಅವರ ಚಿಕಿತ್ಸೆಗೆ ನೆರವಾಗುತ್ತಿರುವವರು  ಮತ್ತು ತಮಿಳುನಾಡಿನ ಜನತೆಯ ಜೊತೆ ನನ್ನ ಪ್ರಾರ್ಥನೆ ಇದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com