ಇಂಟರ್ ನೆಟ್ ರಹಿತ ಪೇಟಿಎಂ ವಹಿವಾಟುಗಳನ್ನು ಬಳಕೆ ಮಾಡಲು( ಗ್ರಾಹಕರು ಹಾಗೂ ವ್ಯಾಪಾರಿಗಳು) ಮೊದಲು ಪೇಟಿಎಂ ನಲ್ಲಿ ತಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಣಿ ಮಾಡಿಕೊಂಡು 4- ಅಂಕಿಗಳ ಪೇಟಿಎಂ ಪಿನ್ ಸೆಟ್ ಮಾಡಬೇಕು. ನಂತರ ಗ್ರಾಹಕರು ಹಣ ಸ್ವೀಕರಿಸುವವರ ಮೊಬೈಲ್ ನಂಬರ್ ಹಾಗೂ ಪಾವತಿ ಮಾಡಬೇಕಿರುವ ಮೊತ್ತ, ಪೇಟಿಎಂ ಪಿನ್ ನ್ನು ನಮೂದಿಸಿ ಒಂದು ಪೇಟಿಎಂ ವಾಲೆಟ್ ನಿಂದ ಮತ್ತೊಂದು ಪೇಟಿಎಂ ವಾಲೆಟ್ ಗೆ ಹಣವನ್ನು ವರ್ಗಾವಣೆ ಮಾಡಬಹುದಾಗಿದೆ. ಇಂಟರ್ ನೆಟ್ ಹೊಂದದೇ ವಹಿವಾಟು ನಡೆಸಬಹುದಾಗಿದೆಯಾದರೂ ಪೇಟಿಎಂ ಖಾತೆಯನ್ನು ಪ್ರಾರಂಭಿಸಿ ಪಿನ್ ನ್ನು ನಮೂದಿಸಲು ಮೊದಲ ಬಾರಿಗೆ ಇಂಟರ್ ನೆಟ್ ಅತ್ಯಗತ್ಯವಾಗಿದೆ.