ನೋಟು ಹಿಂಪಡೆತ ನಿರ್ಧಾರವನ್ನು ಉಗ್ರವಾಗಿ ಟೀಕಿಸಿದ ಗೋವಾ ಬಿಜೆಪಿ ಮೈತ್ರಿ ಪಕ್ಷ

ಗೋವಾದಲ್ಲಿ ಬಿಜೆಪಿಯ ಮೈತ್ರಿ ಪಕ್ಷ ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ (ಎಂ ಜಿ ಪಿ), ಕೇಂದ್ರ ಸರ್ಕಾರದ ೫೦೦ ಮತ್ತು ೧೦೦೦ ರೂ ನೋಟುಗಳನ್ನು ಹಿಂಪಡೆದಿರುವ ನಿರ್ಧಾರ ನಗದು ಬಿಕ್ಕಟ್ಟನ್ನು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಪಣಜಿ: ಗೋವಾದಲ್ಲಿ ಬಿಜೆಪಿಯ ಮೈತ್ರಿ ಪಕ್ಷ ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ (ಎಂಜಿಪಿ), ಕೇಂದ್ರ ಸರ್ಕಾರದ ೫೦೦ ಮತ್ತು ೧೦೦೦ ರೂ ನೋಟುಗಳನ್ನು ಹಿಂಪಡೆದಿರುವ ನಿರ್ಧಾರ ನಗದು ಬಿಕ್ಕಟ್ಟನ್ನು ಸೃಷ್ಟಿಸಿ ಸಾಮಾನ್ಯರಿಗೆ ಅಪಾರ ತೊಂದರೆ ಉಂಟುಮಾಡಿದೆ ಎಂದು ಗುರುವಾರ ಹೇಳಿದೆ. 
"ಕಪ್ಪು ಹಣವನ್ನು ತೊಲಗಿಸುವ ಯೋಜನೆ ಒಳ್ಳೆಯದಾಗಿದ್ದರು, ಅದನ್ನು ನಿರ್ವಹಿಸಿರುವ ರೀತಿ ಜನರಿಗೆ ಅಪಾರ ತೊಂದರೆಗಳನ್ನು ಎದುರಿಸುವಂತೆ ಮಾಡಿದೆ" ಎಂದು ಎಂಜಿಪಿ ಅಧ್ಯಕ್ಷ ದೀಪಕ್ ಧಾವಲೀಕರ್ ವರದಿಗಾರರಿಗೆ ಹೇಳಿದ್ದಾರೆ. 
ಬ್ಯಾಂಕ್ ಖಾತಾದಾರರಿಗೆ ಒದಗಿರುವ ಈ ತೊಂದರೆ, ಬಿಜೆಪಿ-ಎಂಜಿಪಿ ಮೈತ್ರಿ ಆಡಳಿತ ಸರ್ಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಸಂಕಷ್ಟ ತರಲಿದೆಯೇ ಎಂಬ ಪ್ರಶ್ನೆಗೆ "ನಾನು ಇದಕ್ಕೆ ಉತ್ತರಿಸಲು ಸಾಧ್ಯವಿಲ್ಲ. ನಿಜ ಸ್ಥಿತಿ ಏನೆಂದು ನಿಮಗೆ ತಿಳಿದಿದೆ" ಎಂದು ಕೂಡ ಅವರು ಹೇಳಿದ್ದಾರೆ. 
ಗೋವಾದಲ್ಲಿ ಬಹುತೇಕ ಬ್ಯಾಂಕ್ ಗಳು ನಗದು ಕೊರತೆಯಿಂದ ನರಳುತ್ತಿದ್ದರೆ, ಬಹುತೇಕ ಎಟಿಎಂಗಳು ಬಾಗಿಲು ಮುಚ್ಚಿವೆ. 
ಒಳ್ಳೆಯ ಯೋಚನೆಯಿಂದ ಜಾರಿಗೆ ತರಲಾಗಿರುವ ಈ ನಿರ್ಧಾರ ಜನರಿಗೆ ಸಾಕಷ್ಟು ತೊಂದರೆ ತಂದೊಡ್ಡಿದೆ ಎಂದು ಮುಖ್ಯಮಂತ್ರಿ ಲಕ್ಷ್ಮಿಕಾಂತ್ ಪರ್ಸೆಕರ್ ಕೂಡ ಸಾಕಷ್ಟು ಬಾರಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com