ಅಧಿಕಾರಿಗಳ ಮನೆ ಮೇಲೆ ಐಟಿ ದಾಳಿ: ಡಿ.14ರವರೆಗೆ ಎಸ್ ಸಿ ಜಯಚಂದ್ರ ಇಡಿ ವಶಕ್ಕೆ

ಇತ್ತೀಚಿಗಷ್ಟೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ವೇಳೆ ನೂರಾರು ಕೋಟಿ ರುಪಾಯಿ ಆಸ್ತಿ ಪತ್ತೆಯಾಗಿ ರಾಷ್ಟ್ರ ಮಟ್ಟದಲ್ಲಿ ಗಮನ...
ಐಟಿ ದಾಳಿ ವೇಳೆ ಪತ್ತೆಯಾದ ನಗದು - ಜಯಚಂದ್ರ
ಐಟಿ ದಾಳಿ ವೇಳೆ ಪತ್ತೆಯಾದ ನಗದು - ಜಯಚಂದ್ರ
ಬೆಂಗಳೂರು: ಇತ್ತೀಚಿಗಷ್ಟೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ವೇಳೆ ನೂರಾರು ಕೋಟಿ ರುಪಾಯಿ ಆಸ್ತಿ ಪತ್ತೆಯಾಗಿ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದ್ದ ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮದ ಯೋಜನಾಧಿಕಾರಿ ಎಸ್‌.ಸಿ.ಜಯಚಂದ್ರ ಅವರನ್ನು ಸಿಬಿಐ ವಿಶೇಷ ಕೋರ್ಟ್ ಶುಕ್ರವಾರ ಜಾರಿ ನಿರ್ದೇಶನಾಲಯ(ಇಡಿ)ದ ವಶಕ್ಕೆ ನೀಡಿದೆ.
ಐಟಿ ದಾಳಿಯ ನಂತರ ರಾಜ್ಯ ಸರ್ಕಾರದ ಸೇವೆಯಿಂದ ಅಮಾನತುಗೊಂಡಿರುವ ಭ್ರಷ್ಟ ಅಧಿಕಾರಿಗಳಾದ ಟಿಎನ್ ಚಿಕ್ಕರಾಯಪ್ಪ ಹಾಗೂ ಎಸ್‌ಸಿ ಜಯಚಂದ್ರ ಅವರ ವಿರುದ್ಧ ಸಿಬಿಐ, ಜಾರಿ ನಿರ್ದೇಶನಾಲಯ ಹಾಗೂ ಎಸಿಬಿ ತನಿಖೆ ನಡೆಸುತ್ತಿದ್ದು, ಪ್ರಸ್ತೂತ ಇಡಿ ವಶದಲ್ಲಿದ್ದ ಜಯಚಂದ್ರ ಅವರನ್ನು ಇಂದು ಬೆಂಗಳೂರಿನ ಸಿಬಿಐ ವಿಶೇಷ ಕೋರ್ಟ್ ಗೆ ಹಾಜರುಪಡಿಸಲಾಯಿತು.
ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರದೀಪ್ ಎಸ್ ಬಾಳಿಕಾಯಿ ಅವರು, ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ಡಿಸೆಂಬರ್ 14ರವರೆಗೆ ಇಡಿ ವಶಕ್ಕೆ ನೀಡಿದ್ದಾರೆ.
ಇದೇ ಪ್ರಕರಣ ಸಂಬಂಧ ಸಿಬಿಐಯಿಂದ ಬಂಧನಕ್ಕೊಳಗಾಗಿದ್ದ ಐದನೇ ಆರೋಪಿ ಚಂದ್ರಕಾಂತ್ ರಾಮಲಿಗಂ ಹಾಗೂ 6ನೇ ಆರೋಪಿಯಾದ ನಜೀರ್ ಅಹಮ್ಮದ್ ಅವರನ್ನು ಡಿ.23ರವರೆಗೆ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶಿಸಿದೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಿನ್ನೆಯಷ್ಟೇ ಜಯಚಂದ್ರ ಅವರ ಬಾವಮೈದುನ ಜಿ. ಪ್ರಶಾಂತ್ ಸೇರಿ 7 ಮಂದಿಯನ್ನು ಬಂಧಿಸಿದ್ದರು. ಅಲ್ಲದೆ ಆರೋಪಿಗಳಿಂದ ಎರಡು ಸಾವಿರ ರುಪಾಯಿ ಮೌಲ್ಯ 92 ಲಕ್ಷ ರುಪಾಯಿಯನ್ನು ವಶಪಡಿಸಿಕೊಂಡಿದ್ದಾರೆ.
ಜಯಚಂದ್ರ ಹಾಗೂ ಪ್ರಶಾಂತ್ ಹಳೆ ನೋಟ್ ಗಳನ್ನು ಹೊಸ ನೋಟ್ ಗಳಿಗೆ ಬದಲಾಯಿಸಿಕೊಡುವ ವ್ಯವಸ್ಥಿತ ಜಾಲ ರಚಿಸಿಕೊಂಡಿದ್ದು, ಇದಕ್ಕಾಗಿ ಶೇ.2ರಿಂದ 35ರವರೆಗೆ ಕಮಿಷನ್ ಪಡೆಯುತ್ತಿದ್ದರು ಎಂದು ಇಡಿ ಪ್ರಕಟಣೆಯಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com