ಗೋವಾ ಬಿಜೆಪಿ-ಎಂಜಿಪಿ ಮೈತ್ರಿ ಬಿಕ್ಕಟ್ಟು; ತೀವ್ರಗೊಂಡ ಬಿರುಕು

ಗೋವಾದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ-ಎಂಜಿಪಿ ಮೈತ್ರಿ ಪಕ್ಷಗಳ ನಡುವೆ ಉಂಟಾಗಿರುವ ಕಲಹ ಸೋಮವಾರವೂ ಬಗೆಹರಿಯುವಂತೆ ಕಂಡಿಲ್ಲ. ಎಂಜಿಪಿ ಸಚಿವರಿಗೆ ಸಂಪುಟ ತೊರೆದು ಹೋಗುವಂತೆ ಮತ್ತು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಪಣಜಿ: ಗೋವಾದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ-ಎಂಜಿಪಿ ಮೈತ್ರಿ ಪಕ್ಷಗಳ ನಡುವೆ ಉಂಟಾಗಿರುವ ಕಲಹ ಸೋಮವಾರವೂ ಬಗೆಹರಿಯುವಂತೆ ಕಂಡಿಲ್ಲ. ಎಂಜಿಪಿ ಸಚಿವರಿಗೆ ಸಂಪುಟ ತೊರೆದು ಹೋಗುವಂತೆ ಮತ್ತು ಸಹನೆ ಪರೀಕ್ಷಿಸದಂತೆ ಮುಖ್ಯಮಂತ್ರಿ ಲಕ್ಷ್ಮಿಕಾಂತ್ ಪರ್ಸೆಕರ್ ಹೇಳಿರುವ ಹಿನ್ನಲೆಯಲ್ಲಿ ಬಿರುಕು ಆಳವಾಗಿದೆ. 
"ಅವರು ತಮ್ಮ ಸ್ಥಾನ ಬಿಟ್ಟು ಹೋಗಬೇಕು. ಅವರು ಅಧಿಕಾರವನ್ನು ಕೊನೆಯ ಘಳಿಗೆಯವರೆಗೂ ಅನುಭವಿಸುತ್ತಾರೆ ನಂತರ ಕೊನೆಯ ಕ್ಷಣದಲ್ಲಿ ಹೊಸ ಧ್ವಜ ಹಿಡಿದು ಹೊರಟುಬಿಡುತ್ತಾರೆ. ಇದು ಸರಿಯಲ್ಲ. ಅವರು ತುಸು ಯೋಚಿಸಬೇಕು. ಅವರಿಗೆ ಗೌರವ ಇರುವದಾದರೆ ರಾಜೀನಾಮೆ ನೀಡಿ ಹೋಗಬೇಕು" ಎಂದು ಪರ್ಸೆಕರ್ ಕಂದಾಯ ಸಚಿವ ಸುದಿನ್ ಧವಳಿಕರ್ ಬಗ್ಗೆ ಹೇಳಿದ್ದಾರೆ. ಪರ್ಸೆಕರ್ ನಾಯಕತವಾದ ಬಗ್ಗೆ ತಮಗೆ ತೃಪ್ತಿಯಿಲ್ಲ ಎಂದು ಧವಳಿಕರ್ ಭಾನುವಾರ ಹೇಳಿದ್ದರು. 
ಮುಂದಿನ ವರ್ಷದ ಆರಂಭದಲ್ಲಿ ೪೦ ಸದಸ್ಯರ ವಿಧಾನಸಭಾ ಚುನಾವಣೆ ನಡೆಯಬೇಕಿದ್ದು, ಬಿಜೆಪಿ ಮತ್ತು ಎಂಜಿಪಿ ನಡುವೆ ರಾಜಕೀಯ ಹಗ್ಗಜಗ್ಗಾಟ ತೀವ್ರಗೊಂಡಿದೆ.
ಸದ್ಯಕ್ಕೆ ವಿಧಾನಸಭೆಯಲ್ಲಿ ಬಿಜೆಪಿ ಪಕ್ಷಕ್ಕೆ ೨೧ ಸದಸ್ಯರ ಸರಳ ಬಹುಮತವಿದೆ. ಎಂಜಿಪಿ ಬಲಾಬಲ ೩ ಇದ್ದು. ಅವರಲ್ಲಿ ಇಬ್ಬರು ಸಂಪುಟ ಸಚಿವರು. ೨೦೦೭ ರಿಂದ ೨೦೧೨ ರ ನಡುವೆ ಎಂಜಿಪಿ ಆಡಳಿತ ಕಾಂಗ್ರೆಸ್ ನ ಮೈತ್ರಿ ಪಕ್ಷವಾಗಿತ್ತು.
ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷವನ್ನು ಬಿಜೆಪಿ ಇಲ್ಲಿಯವರೆಗೂ ಅನುಸರಿಸಿಕೊಂಡು ಬಂದಿದೆ, ಆದರೆ ಆ ನಾಯಕರ ಪ್ರತಿಕ್ರಿಯೆಗಳು ನನ್ನ ಸಹನೆ ಪರೀಕ್ಷಿಸುತ್ತಿವೆ ಎಂದು ಕೂಡ ಪರ್ಸೆಕರ್ ಹೇಳಿದ್ದಾರೆ. 
"ನಾನು ಇತರರ ಬಗ್ಗೆ ಬಗ್ಗೆ ಪ್ರತಿಕ್ರಿಯಿಸುವುದರಿಂದ ಹಿಂದೆ ಸರಿಯುತ್ತೇನೆ. ನಮ್ಮ ಕೆಳಗಿರುವವರ ಬಗ್ಗೆ ನಾನು ಹೆಚ್ಚು ಮಾತನಾಡಲಾರೆ.... ಈ ಬಾರಿ ನನ್ನ ಸಹನೆ ಪರೀಕ್ಷಿಸಿತು" ಎಂದು ಹೇಳಿರುವ ಪರ್ಸೆಕರ್, ರಾಜ್ಯದ ೪೦ ಕ್ಷೇತ್ರಗಳಲ್ಲೂ ಚುನಾವಣೆ ಎದುರಿಸಲು ಬಿಜೆಪಿ ಸಿದ್ಧವಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com