ಚೆನ್ನೈಯಿಂದ ಗೋವಾದತ್ತ ವರ್ಧಾ ಚಂಡಮಾರುತ

ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ಭಾರಿ ಆತಂಕ ಸೃಷ್ಟಿಸಿರುವ ವರ್ಧಾ ಚಂಡಮಾರುತ ಇದೀಗ ಚೆನ್ನೈಯಿಂದ ದಕ್ಷಿಣ ಗೋವಾದತ್ತ ತೆರಳುತ್ತಿದ್ದು,...
ಚೆನ್ನೈನಲ್ಲಿ ಧರೆಗುರುಳಿದ ಮರ
ಚೆನ್ನೈನಲ್ಲಿ ಧರೆಗುರುಳಿದ ಮರ
ಪಣಜಿ: ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ಭಾರಿ ಆತಂಕ ಸೃಷ್ಟಿಸಿರುವ ವರ್ಧಾ ಚಂಡಮಾರುತ ಇದೀಗ ಚೆನ್ನೈಯಿಂದ ದಕ್ಷಿಣ ಗೋವಾದತ್ತ ತೆರಳುತ್ತಿದ್ದು, ಡಿಸೆಂಬರ್ 14ರಂದು ಪಣಜಿಗೆ ಅಪ್ಪಳಿಸಲಿದೆ ಎಂದು ಸೋಮವಾರ ಅಧಿಕಾರಿಗಳು ತಿಳಿಸಿದ್ದಾರೆ.
ಚೆನ್ನೈಯಿಂದ ಹೊರಟಿರುವ ವರ್ಧಾ ನಾಳೆ ಕರ್ನಾಟಕ ತಲುಪಲಿದ್ದು, ಬುಧವಾರ ಗೋವಾಗೆ ಅಪ್ಪಳಿಸಲಿದೆ ಎಂದು ಗೋವಾದಲ್ಲಿರುವ ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಎಂಎಲ್ ಶಾಹು ಅವರು ಹೇಳಿದ್ದಾರೆ.
ಇಂದು ಮಧ್ಯಾಹ್ನ ಚೆನ್ನೈಗೆ ಅಪ್ಪಳಿಸಿರುವ ವರ್ಧಾ ಚಂಡಮಾರುತದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಬಿರುಗಾಳಿ ಸಹಿತ ಭಾರಿ ಮಳೆ ಸುರಿಯುತ್ತಿದೆ.
ಧರೆಗುರುಳಿದ ಸಾವಿರಾರು ಮರಗಳು
ಇನ್ನು ಚೆನ್ನೈಗೆ ಅಪ್ಪಳಿಸಿರುವ ವರ್ಧಾ ಚಂಡಮಾರುತದ ಪರಿಣಾಮ ನಗರಾದಾದ್ಯಂತ ಸಾವಿರಾರು ಮರಗಳು ಧರೆಗುರುಳಿದ್ದು, ಮಾಜಿ ಸಿಎಂ ಜಯಲಲಿತಾ ಅವರ ನಿವಾಸ ಪೋಯಸ್ ಗಾರ್ಡನ್ ನಲ್ಲಿ 7 ಮರಗಳು ಧರೆಗುರುಳಿದ್ದು,  ಉಳಿದಂತೆ ಮಂಡವೇಲಿಯಲ್ಲಿ 23, ಗೋಪಾಲಪುರಂನಲ್ಲಿ 16, ರಾಯಪೇಟೆಯಲ್ಲಿ 59, ನುಂಗಬಾಕ್ಕಂನಲ್ಲಿ 20 ಮರಗಳು ಸೇರಿದಂತೆ ಚೆನ್ನೈನಾದ್ಯಂತ ಸಾವಿರಕ್ಕೂ ಅಧಿಕ ಮರಗಳು ಧರೆಗುರುಳಿವೆ ಎಂದು ತಿಳಿದುಬಂದಿದೆ. ಇನ್ನ  ಚಂಡಮಾರುತದಿಂದಾಗಿ ಚೆನ್ನೈನಲ್ಲಿ ಬೀಳುತ್ತಿರುವ ಭಾರಿ ಮಳೆಯಿಂದಾಗಿ ಹಲವೆಡೆ ಭೂಕುಸಿತವಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಮುಂಜಾಗ್ರತಾ ಕ್ರಮವಾಗಿ ಚೆನ್ನೈನಾದ್ಯಂತ ವಿದ್ಯುತ್ ಸ್ಥಗಿತಗೊಳಿಸಲಾಗಿದ್ದು, ಎಲ್ಲ  ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಅಂತೆಯೇ ಚೆನ್ನೈನ ಎಲ್ಲ ಖಾಸಗಿ ಕಂಪನಿಗಳು ಕೂಡ ರಜೆಘೋಷಣೆ ಮಾಡಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com