ಎಸ್ ಸಿ, ಎಸ್ ಟಿ ಪಟ್ಟಿ ತಿದ್ದುಪಡಿ ಕಾಯ್ದೆ ಲೋಕಸಭೆಯಲ್ಲಿ ಮಂಡನೆ

ಕೆಲವು ಸಮುದಾಯಗಳನ್ನು ಪರಿಶಿಷ್ಟ ಜಾತಿಗಳ (ಎಸ್ ಸಿ) ಪಟ್ಟಿಯಿಂದ ಪರಿಶಿಷ್ಟ ಪಂಗಡಗಳ (ಎಸ್ ಟಿ) ಪಟ್ಟಿಗೆ ವರ್ಗಾಯಿಸುವ ಮತ್ತು ಕೆಲವು ಹೊಸ ಸಮುದಾಯಗಳನ್ನು ಪರಿಶಿಷ್ಟ ಪಂಗಡಗಳ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಕೆಲವು ಸಮುದಾಯಗಳನ್ನು ಪರಿಶಿಷ್ಟ ಜಾತಿಗಳ (ಎಸ್ ಸಿ) ಪಟ್ಟಿಯಿಂದ ಪರಿಶಿಷ್ಟ ಪಂಗಡಗಳ (ಎಸ್ ಟಿ) ಪಟ್ಟಿಗೆ ವರ್ಗಾಯಿಸುವ ಮತ್ತು ಕೆಲವು ಹೊಸ ಸಮುದಾಯಗಳನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸುವ ತಿದ್ದುಪಡಿ ಕಾಯ್ದೆಯನ್ನು ಲೋಕಸಭೆಯಲ್ಲಿ ಬುಧವಾರ ಮಂಡಿಸಲಾಗಿದೆ. 
ಬುಡಕಟ್ಟು ವ್ಯವಹಾರಗಳ ಸಚಿವ ಜುವಾಲ್ ಓರಾಮ್ ಪರಿಚಯಿಸಿರುವ ಈ ಕಾಯ್ದೆಯಲ್ಲಿ, ಜಾರ್ಖಂಡದ ಬೊಗ್ತಾ ಸಮುದಾಯವನ್ನು ಎಸ್ ಸಿ ಪಟ್ಟಿಯಿಂದ ಎಸ್ ಟಿ ಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡಿದೆ. 
ಸಂವಿಧಾನ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ) ಆದೇಶಗಳು (ತಿದ್ದುಪಡಿ)ಕಾಯ್ದೆ ೨೦೧೬, ಅಸ್ಸಾಂ, ಛತ್ತೀಸಘರ್, ಜಾರ್ಖಂಡ, ತಮಿಳುನಾಡು ಮತ್ತು ತ್ರಿಪುರಾಗೆ ಸಂಬಂಧಿಸಿದ ಇನ್ನಷ್ಟು ಸಮುದಾಯಗಳನ್ನು ಎಸ್ ಟಿ ಪಟ್ಟಿಗೆ ಸೇರಿಸಲು ಶಿಫಾರಸ್ಸು ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com