ಪ್ರಧಾನಿ ವಿರುದ್ಧ ಅರೋಪಗಳಿಗೆ ಗಟ್ಟಿ ಸಾಕ್ಷ್ಯಗಳನ್ನು ತನ್ನಿ: ಎನ್ ಜಿ ಒಗೆ ಸುಪ್ರೀಂ ಕೋರ್ಟ್
ಹಿಂದಿನ ಗುಜರಾತ್ ಮುಖ್ಯಮಂತ್ರಿ, ಸದರಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧದ ಲಂಚ ಆರೋಪವನ್ನು ಸಮರ್ಥಿಸಲು ಗಟ್ಟಿ ಸಾಕ್ಷ್ಯಗಳನ್ನು ತನ್ನಿ ಎಂದು ದೂರುದಾರ ಎನ್ ಜಿ ಒಗೆ ಸುಪ್ರೀಂ ಕೋರ್ಟ್
ನವದೆಹಲಿ: ಹಿಂದಿನ ಗುಜರಾತ್ ಮುಖ್ಯಮಂತ್ರಿ, ಸದರಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧದ ಲಂಚ ಆರೋಪವನ್ನು ಸಮರ್ಥಿಸಲು ಗಟ್ಟಿ ಸಾಕ್ಷ್ಯಗಳನ್ನು ತನ್ನಿ ಎಂದು ದೂರುದಾರ ಎನ್ ಜಿ ಒಗೆ ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
"ನೀವು ಬಹಳ ಧೃಢವಾದ ಮತ್ತು ನಿಖರವಾದ ಸಾಕ್ಷ್ಯಗಳನ್ನು ತರಬೇಕು" ಎಂದು ನ್ಯಾಯಾಧೀಶ ಜಗದೀಶ್ ಸಿಂಗ್ ಖೇಕರ್ ಮತ್ತು ನ್ಯಾಯಾಧೀಶ ಅರುಣ್ ಮಿಶ್ರಾ ಒಳಗೊಂಡ ವಿಭಾಗೀಯ ಪೀಠ ಕಾಮನ್ ಕಾಸಸ್ ಎನ್ ಜಿ ಒದ ವಕೀಲ ಪ್ರಶಾಂತ್ ಭೂಷಣ್ ಅವರಿಗೆ ತಿಳಿಸಿದ್ದು, "ನಾವು ಸರ್ಕಾರದ ಅತಿ ಉನ್ನತ ಭಾಗವಾಗಿರುವವರ ಬಗ್ಗೆ ವಿಚಾರಣೆ ಮಾಡುತ್ತಿದ್ದೇವೆ" ಎಂದು ಕೂಡ ಪೀಠ ಹೇಳಿದೆ.
"ನಾವು ಇಲ್ಲಿನ ಕಷ್ಟವನ್ನು ಹೇಳುತ್ತೇವೆ... ನಾವು ಸರ್ಕಾರದ ಅತಿ ಉನ್ನತ ಭಾಗವಾಗಿರುವವರ ಬಗ್ಗೆ ವಿಚಾರಣೆ ಮಾಡುತ್ತಿದ್ದೇವೆ. ಅವರ ಪ್ರಾಮಾಣಿಕತೆಯ ಮೇಲೆ ಆರೋಪ ತಪ್ಪಿದ್ದರೆ ಈ ಉನ್ನತ ಸರ್ಕಾರಿ ಭಾಗಕ್ಕೆ ಕೆಲಸ ಮಾಡಲು ಕಷ್ಟವಾಗುತ್ತದೆ" ಎಂದು ಕೂಡ ಪೀಠ ಗಮನಿಸಿದೆ.
ವಿಚಾರಣೆಯನ್ನು ಕೋರ್ಟ್ ಶುಕ್ರವಾರಕ್ಕೆ ಮುಂದೂಡಿದೆ.
ಹೆಚ್ಚಿವರಿ ದಾಖಲೆಗಳನ್ನು ಒದಗಿಸುವುದಕ್ಕೆ ಹೆಚ್ಚಿನ ಸಮಯ ಕೋರಿದ ಭೂಷಣ್, ಸಮಯ ನೀಡುವುದಕ್ಕೆ ತೊಂದರೆ ಏನು ಅಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಸಾಕ್ಷ್ಯಗಳಿಲ್ಲದೆ ಆರೋಪ ಮಾಡುವುದು ಸರಿಯಲ್ಲ ಎಂದು ನ್ಯಾಯಾಧೀಶ ಮಿಶ್ರ, ಭೂಷಣ್ ಅವರಿಗೆ ಹೇಳಿದ್ದು "ದೇಶದ ಪ್ರಧಾನಿ ಅವರ ವಿರುದ್ಧ ನೀವು ಆರೋಪ ಮಾಡುತ್ತಿರುವುದು" ಎಂದಿದ್ದಾರೆ.
ವ್ಯವಹಾರ ಹಿತಾಸಕ್ತಿಗಳನ್ನು ಕಾಪಾಡಲು ಹಲವು ರಾಜಕಾರಣಿಗಳಿಗೆ ಎರಡು ಕಾರ್ಪೊರೇಟ್ ಸಂಸ್ಥೆಗಳು ಲಂಚ ನೀಡಿರುವುದನ್ನು ವಿಶೇಷ ತನಿಖಾ ದಳದಿಂದ ತನಿಖೆ ಮಾಡಿಸಬೇಕೆಂದು ಕಾಮನ್ ಕಾಸ್ ಅರ್ಜಿ ಸಲ್ಲಿಸಿತ್ತು.
ಇದು ಅತೀವ ಗಂಭೀರ ವಿಚಾರ ಎಂದು ಬಗೆದ್ದಿದ್ದ ಎನ್ ಜಿಒ ಇದಕ್ಕಾಗಿ ಕೋರ್ಟ್ ಮಧ್ಯಸ್ಥಿಕೆ ವಹಿಸಬೇಕು ಎಂದು ಕೂಡ ಕೋರಿತ್ತು "ತೆರಿಗೆ ಇಲಾಖೆ ದಾಳಿ ಮಾಡಿದಾಗ ಸಿಕ್ಕಿದ್ದ ದಾಖಲೆಗಳಲ್ಲಿ ಪ್ರಮುಖ ಸಾರ್ವಜನಿಕ ವ್ಯಕ್ತಿಗಳಿಗೆ ಲಂಚ ನೀಡಿರುವುದು ಬಯಲಾಗಿದೆ ಆದರೆ ತೆರಿಗೆ ಇಲಾಖೆ ಮತ್ತಿ ಸಿಬಿಐ ಇದನ್ನು ಸದ್ದಿಲ್ಲದೇ ಮುಚ್ಚಿ ಹಾಕಿದೆ" ಎಂದು ಕೂಡ ಆರೋಪಿಸಲಾಗಿತ್ತು.
ಒಂದು ಕಾರ್ಪೊರೇಟ್ ಸಂಸ್ಥೆಯ ಮೇಲೆ ಸಿಬಿಐ ಅಕ್ಟೋಬರ್ ೧೫, ೨೦೧೩ ರಲ್ಲಿ ದಾಳಿ ನಡೆಸಿದ್ದರೆ, ಮತ್ತೊಂದು ಸಂಸ್ಥೆಯ ಮೇಲೆ ತೆರಿಗೆ ಇಲಾಖೆ ನವೆಂಬರ್ ೨೨, ೨೦೧೪ ರಂದು ದಾಳಿ ನಡೆಸಿತ್ತು.