ಮತ್ತಷ್ಟು ಸಚಿವರ ಬಣ್ಣ ಬಯಲು ಮಾಡುತ್ತೇನೆ: ಆರ್ ಟಿಐ ಕಾರ್ಯಕರ್ತ ರಾಜಶೇಖರ್ ವಾಗ್ದಾಳಿ

ಮಾಜಿ ಸಚಿವ ಎಚ್.ವೈ.ಮೇಟಿ ಅವರು ನಡೆಸಿದ ರಾಸಲೀಲೆ ಸಿಡಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿ, ಸಚಿವ ತಲೆದಂಡ ಪಡೆದ ಆರ್ ಟಿಐ ಕಾರ್ಯಕರ್ತ...
ಎಚ್.ವೈ.ಮೇಟಿ - ರಾಜಶೇಖರ್
ಎಚ್.ವೈ.ಮೇಟಿ - ರಾಜಶೇಖರ್
ನವದೆಹಲಿ: ಮಾಜಿ ಸಚಿವ ಎಚ್.ವೈ.ಮೇಟಿ ಅವರು ನಡೆಸಿದ ರಾಸಲೀಲೆ ಸಿಡಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿ, ಸಚಿವ ತಲೆದಂಡ ಪಡೆದ ಆರ್ ಟಿಐ ಕಾರ್ಯಕರ್ತ ರಾಜಶೇಖರ್ ಮುಲಾಲಿ ಅವರು ಈಗ ಮತ್ತಷ್ಟು ಸಚಿವರ ಬಣ್ಣ ಬಯಲು ಮಾಡುವುದಾಗಿ ಬುಧವಾರ ಹೇಳಿದ್ದಾರೆ.
ಸಿಡಿ ಬಿಡುಗಡೆಯಾದ ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಜಶೇಖರ್, ಮೇಟಿ ಪ್ರಕರಣದ ಸಂಪೂರ್ಣ ಹೊಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಹೊರಬೇಕು ಎಂದರು.
ರಾಜ್ಯದಲ್ಲಿನ ಬೆಳವಣಿಗೆಯನ್ನು ಜನ ನೋಡುತ್ತಿದ್ದಾರೆ. ಕರ್ನಾಟಕಕ್ಕೆ ಅವಮಾನ ಆಗಿದ್ದರೆ ಅದಕ್ಕೆ ಸಿಎಂ ಹೊಣೆ ಎಂದ ರಾಜಶೇಖರ್, ಮೇಟಿಯನ್ನು ಈ ಕೂಡಲೇ ಪಕ್ಷದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ರಾಜಶೇಖರ್, ರಾಜ್ಯದಲ್ಲಿ ಮಹಿಳೆಯರ ಮತ್ತು ಸರ್ಕಾರಿ ಕಚೇರಿಗಳ ದುರ್ಬಳಕೆ ಆಗುತ್ತಿದೆ. ಒಬ್ಬ ಮಂತ್ರಿಯ ಟಾರ್ಗೆಟ್ ಅಲ್ಲ, ವ್ಯವಸ್ಥೆ ಸರಿಹೋಗಬೇಕು. ಶುದ್ಧವಾಗಿರುವವರು ರಾಜಕೀಯ ಮಾಡಬೇಕು ಮತ್ತು ಸಂತ್ರಸ್ಥೆ ಜೀವಕ್ಕೆ ಏನಾದ್ರು ಆದ್ರೆ ಅದಕ್ಕೆ ಸರ್ಕಾರವೇ ಹೊಣೆ ಎಂದರು.
ಎಚ್ ವೈ ಮೇಟಿ ಮಾತ್ರವಲ್ಲದೇ ಇನ್ನೂ ಇಬ್ಬರು ಸಚಿವರು ಹಾಗೂ ಮೂವರು ಶಾಸಕರ ಅಸಹ್ಯಕರ ರೀತಿಯ ಕೆಲಸದಲ್ಲಿ ಪಾಲ್ಗೊಂಡಿದ್ದು, ಅವರ ವಿರುದ್ಧ ದಾಖಲೆಗಳ ಕೊರತೆ ಇದೆ. ಸೂಕ್ತ ದಾಖಲೆ ಸಿಕ್ಕ ನಂತರ ಅದನ್ನು ಬಹಿರಂಗಪಡಿಸುವುದಾಗಿ ಹೇಳಿದರು. 
ಇನ್ನು ಕಳೆದ ಒಂದು ತಿಂಗಳಿನಿಂದ ನನ್ನ ಫೋನ್ ಕರೆ ಕದ್ದಾಲಿಕೆ ಆಗುತ್ತಿದ್ದು, ಈ ಬಗ್ಗೆ ಕೇಂದ್ರ ಗೃಹ ಸಚಿವರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com