ನಿಮ್ಮ ಪದವಿ ಪ್ರಮಾಣಪತ್ರ ಬಹಿರಂಗಪಡಿಸಿ: ಪ್ರಧಾನಿ ಮೋದಿಗೆ ಕೇಜ್ರಿವಾಲ್ ಆಗ್ರಹ

ಪ್ರಧಾನಿ ನರೇಂದ್ರ ಮೋದಿ ತಮ್ಮ ಶೆಕ್ಷಣಿಕ ಅರ್ಹತೆಯ ಬಗ್ಗೆ ಗೊಂದಲಗಳನ್ನು ಬಗೆಹರಿಸಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ಹೇಳಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ಶೆಕ್ಷಣಿಕ ಅರ್ಹತೆಯ ಬಗ್ಗೆ ಗೊಂದಲಗಳನ್ನು ಬಗೆಹರಿಸಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ಹೇಳಿದ್ದಾರೆ. 
ತಮ್ಮ ಗೃಹದಲ್ಲಿ ವರದಿಗಾರರನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಮೋದಿ ಅವರು ತಮ್ಮ ಪದವಿಗಳನ್ನು ಬಹಿರಂಗ ಪಡಿಸುವುದಕ್ಕೆ ಹಿಂಜರಿಯುತ್ತಿರುವುದನ್ನು ನೋಡಿದರೆ ಅದರ ಅಧಿಕೃತತೆಯ ಬಗ್ಗೆ ಅನುಮಾನ ಸೃಷ್ಟಿಸುತ್ತದೆ ಎಂದಿದ್ದಾರೆ.
"ಹಿಂದೆ ಮೋದಿ ಅವರು ತಾವು ಕಾಲೇಜಿಗೇ ಹೋಗಿಲ್ಲ ಎಂದು ಹೇಳಿದ್ದರು. ನಂತರದ ದಿನಗಳಲ್ಲಿ ಅವರು ಅಂಚೆ ಶಿಕ್ಷಣ ಪದ್ಧತಿಯಲ್ಲಿ ಪದವಿ ಪಡೆದಿರುವುದಾಗಿ ಹೇಳಿದರು ಅದು ಕೂಡ ನಕಲು ಎಂದು ತಿಳಿಯಿತು" ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಹೇಳಿದ್ದಾರೆ. 
"ಈ ಪದವಿ ಪ್ರಾಮಾಣಿಕವಾದದ್ದಾಗಿದ್ದರೆ, ಅದನ್ನು ತೋರಿಸಲು ಮೋದಿ ಅವರು ಹಿಂಜರಿಯುತ್ತಿರುವುದೇಕೆ? ಅವರು ಪದವಿಯನ್ನು ಅಡಿಗಿಸಿಟ್ಟಿರುವುದೇಕೆ?" ಎಂದು ಕೂಡ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ. 
ಕೇಜ್ರಿವಾಲ್ ಅವರು ಪ್ರಧಾನ ಮಾಹಿತಿ ಕಮಿಷನರ್ (ಸಿಐಸಿ) ಅವರ ಮೊರೆ ಹೋಗಿದ್ದ ನಂತರ ಏಪ್ರಿಲ್ ನಲ್ಲಿ ಮೋದಿ ಅವರ ಪದವಿ ಮತ್ತು ಸ್ನಾತ್ತಕೋತ್ತರ ಮಾಹಿತಿಯನ್ನು ಬಹಿರಂಗಪಡಿಸುವಂತೆ ಗುಜರಾತ್ ಮತ್ತು ದೆಹಲಿ ವಿಶ್ವವಿದ್ಯಾಲಯಗಳಿಗೆ ಸಿಐಸಿ ಸೂಚಿಸಿದ್ದರು. 
ನೋಟು ಹಿಂಪಡೆತ ನಿರ್ಧಾರದ ಮೇಲೆ ಕೂಡ ತಮ್ಮ ವಾಗ್ದಾಳಿಯನ್ನು ಮುಂದುವರೆಸಿರುವ ಅರವಿಂದ್ ಕೇಜ್ರಿವಾಲ್, ಈ ನಿರ್ಧಾರದಿಂದ ಉಂಟಾದ ತೊಂದರೆಗಳ ಬಗ್ಗೆ ಮೋದಿಯವರಿಗೆ ಅರಿವಿಲ್ಲ ಜನ ನಂಬಿದ್ದಾರೆ ಆದರೆ ಇದು ಈಗಾಗಲೇ ದೇಶದೆಲ್ಲೆಡೆ ಅವ್ಯವಸ್ಥೆ ಸೃಷ್ಟಿಸಿದೆ. ಆದರೂ ಇದನ್ನು ಅವರು ಹಿಂಪಡೆಯುತ್ತಿಲ್ಲ ಎಂದಿದ್ದಾರೆ .
"ಅವರ ಪದವಿ ಪ್ರಮಾಣಪತ್ರದ ಮೇಲೆ ಇಂದು ಗುಜರಾತ್ ಹೈಕೋರ್ಟ್ ನಲ್ಲಿ ವಿಚಾರಣೆ ಇದೆ. ಮೋದಿ ಪದವಿ ಪ್ರಮಾಣಪತ್ರವನ್ನು ತೋರಿಸಲು ಸಿದ್ಧಾರಾಗಿರುವುದಾಗಿ ಅವರ ಪರ ವಕೀಲ ಹೇಳಬೇಕು" ಎಂದು ಕೂಡ ಕೇಜ್ರಿವಾಲ್ ಹೇಳಿದ್ದು "ನೋಟು ಹಿಂಪಡೆತದ ನಿರ್ಧಾರದ ಮೇಲೆ ಬಂದಿರುವ ದುಡ್ಡನ್ನು ಬ್ಯಾಂಕ್ ಗಳು ಮೋದಿ ಗೆಳೆಯರ ಸಾಲ ಮನ್ನಾ ಮಾಡಲು ಬಳಸಬಾರದು" ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com