ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್ ಖರ್ಗೆ
ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್ ಖರ್ಗೆ

ಅಗಸ್ಟಾ ವೆಸ್ಟ್ ಲ್ಯಾಂಡ್ ಒಪ್ಪಂದ ಕುರಿತು ಚರ್ಚಿಸಲು ನಾವು ಸಿದ್ಧ: ಖರ್ಗೆ

ನಿಯಮಗಳನ್ನು ಪಾಲಿಸಿದರೆ ಅಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಚಾಪರ್ ಒಪ್ಪಂದ ಪ್ರಕರಣವನ್ನು ಚರ್ಚಿಸಲು ನಮ್ಮ ಪಕ್ಷ ಸಿದ್ಧವಿದೆ ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್ ಖರ್ಗೆ
ನವದೆಹಲಿ: ನಿಯಮಗಳನ್ನು ಪಾಲಿಸಿದರೆ ಅಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಚಾಪರ್ ಒಪ್ಪಂದ ಪ್ರಕರಣವನ್ನು ಚರ್ಚಿಸಲು ನಮ್ಮ ಪಕ್ಷ ಸಿದ್ಧವಿದೆ ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಗುರುವಾರ ಹೇಳಿದ್ದಾರೆ. 
"ಕಳೆದ ಅಧಿವೇಶನದಲ್ಲಿಯೇ ಅಗಸ್ಟಾ ವೆಸ್ಟ್ ಲ್ಯಾಂಡ್ ಸುಧೀರ್ಘ ಚರ್ಚೆಗೆ ಒಳಪಟ್ಟಿದೆ. ಆದರೆ ಅವರು ಮತ್ತೆ ಚರ್ಚಿಸಲು ಇಚ್ಛಿಸಿದರೆ ನಾವು ಸಿದ್ಧರಿದ್ದೇವೆ. ಅವರು ಕೆಲವು ನಿಯಮಗಳನ್ನು ಪಾಲಿಸಿ, ಕಾರ್ಯಪಟ್ಟಿಯಲ್ಲಿ ಒಳಗೊಳ್ಳಬೇಕು" ಎಂದು ಖರ್ಗೆ ಹೇಳಿದ್ದಾರೆ. 
ಸಂಸತ್ತಿನ ಆವರಣದಲ್ಲಿ ಮಾಧ್ಯಮಗಳೊಂದಿಗೆ ಖರ್ಗೆ ಮಾತನಾಡುತ್ತಿದ್ದರು. 
ನೋಟು ಹಿಂಪಡೆತ ಅವ್ಯವಸ್ಥೆಯ್ಯಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಕೂಡ ಖರ್ಗೆ ಆರೋಪಿಸಿದ್ದಾರೆ. 
"ಅವರು ಅಗಸ್ಟಾ ವೆಸ್ಟ್ ಲ್ಯಾಂಡ್ ಪ್ರಕರಣ ಎತ್ತುತ್ತಿದ್ದಾರೆ, ಅವರು ಪೋಸ್ಟರ್ ಗಳನ್ನೂ ಪ್ರದರ್ಶಿಸುತ್ತಿದ್ದಾರೆ. ಗಮನ ಬೇರೆಡೆ ಸೆಳೆಯುವುದು ಅವರ ಇಚ್ಛೆ" ಎಂದಿರುವ ಖರ್ಗೆ "ಅವರು ನಾವು ಹೇಳುವುದನ್ನು ಕೇಳುವುದಕ್ಕೆ ತಯಾರಿಲ್ಲ. ಈ ವಿಷಯವಾಗಿ ಸಭಾಪತಿಯವರ ಜೊತೆಗೆ ಕೂಡ ನಾವು ಮಾತನಾಡಿದ್ದೇವೆ" ಎಂದಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com