ಮೋದಿ ಸರ್ಕಾರದ ಹೊಸ ಯೋಜನೆ ನಾಳೆಯಿಂದ ಜಾರಿ; ಕಪ್ಪು ಬಿಳಿ ಮಾಡಿಕೊಳ್ಳಲು ಮಾರ್ಚ್ 31ರವರೆಗೆ ಅವಕಾಶ

ಕೇಂದ್ರ ಸರ್ಕಾರ ಕಳೆದ ತಿಂಗಳು ಶೇ.50 ತೆರಿಗೆ ಕಟ್ಟಿ ಕಪ್ಪು ಬಿಳಿ ಮಾಡಿಕೊಳ್ಳಲು ರೂಪಿಸಿದ್ದ ಹೊಸ ಕಾನೂನು ನಾಳೆಯಿಂದ ಜಾರಿಗೆ...
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ಕೇಂದ್ರ ಸರ್ಕಾರ ಕಳೆದ ತಿಂಗಳು ಶೇ.50 ತೆರಿಗೆ ಕಟ್ಟಿ ಕಪ್ಪು ಬಿಳಿ ಮಾಡಿಕೊಳ್ಳಲು ರೂಪಿಸಿದ್ದ ಹೊಸ ಕಾನೂನು ನಾಳೆಯಿಂದ ಜಾರಿಗೆ ಬರುತ್ತಿದ್ದು, ಕಪ್ಪು ಬಿಳಿ ಮಾಡಿಕೊಳ್ಳಲು ಕಪ್ಪು ಕುಳಗಳಿಗೆ ಮಾರ್ಚ್ 31, 2017ರವರೆಗೆ ಅವಕಾಶ ನೀಡಿದೆ.
ಕಪ್ಪು ಹಣ ಘೋಷಣೆ ಯೋಜನೆಯಡಿ ಕನಿಷ್ಠ ಶೇ.50 ರಷ್ಟು ತೆರಿಗೆ ಹಾಗೂ ದಂಡ ಕಟ್ಟಿ ತಮ್ಮ ಕಪ್ಪು ಹಣವನ್ನು ಘೋಷಿಸಿಕೊಳ್ಳಬಹುದು ಎಂದು ಕಂದಾಯ ಕಾರ್ಯದರ್ಶಿ ಹಸ್ಮುಖ್ ಅಧಿಯಾ ಅವರು ಶುಕ್ರವಾರ ವರದಿಗಾರರಿಗೆ ತಿಳಿಸಿದ್ದಾರೆ.
ಈ ಯೋಜನೆಯಡಿ ಕಪ್ಪು ಹಣ ಘೋಷಿಸಿಕೊಳ್ಳುವವರ ವಿವರವನ್ನು ನಾವು ಗೌಪ್ಯವಾಗಿಡುತ್ತೇವೆ ಮತ್ತು ಈ ಮಾಹಿತಿಯನ್ನು ಪ್ರಾಸಿಕ್ಯೂಷನ್ ಗಾಗಿ ಬಳಿಸಿಕೊಳ್ಳುವುದಿಲ್ಲ ಎಂದು ಆಧಿಯಾ ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಜನ ಸಹ ಕಪ್ಪು ಹಣದ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಬಹುದು ಎಂದ ಅವರು, ಈ ಸಂಬಂಧ ಇ-ಮೇಲ್ ಐಡಿ ನೀಡಲಾಗಿದ್ದು, blackmoneyinfo@incometax.gov.in ಗೆ ಮಾಹಿತಿ ನೀಡಬಹುದಾಗಿ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿ ಮೂರು ವಾರಗಳ ನಂತರ ವಿತ್ತ ಸಚಿವ ಅರುಣ್‌ ಜೇತ್ಲಿ ಅವರ ಆದಾಯ ತೆರಿಗೆ ಕಾಯಿದೆಯ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ  ಮಂಡಿಸಿದ್ದು, ಅಪನಗದೀಕರಣೋತ್ತರ ಹಣ ಜಮಾವಣೆಯ ಮೇಲೆ ಅದರ ಶೇ.50ರ ಪ್ರಮಾಣದಲ್ಲಿ ವಿಧಿಸಲ್ಪಡುವ ಒಟ್ಟು ತೆರಿಗೆ, ದಂಡ ಮತ್ತು ಸರ್ಚಾರ್ಜ್‌ ಪ್ರಮಾಣವನ್ನು ಪ್ರಸ್ತಾವಿಸಿದ್ದರು.
2016ರ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್‌ ಯೋಜನೆಯಡಿ ಕಪ್ಪು ಹಣವನ್ನು ಘೋಷಿಸಿಕೊಳ್ಳಲು ಅವಕಾಶ ನೀಡಲಾಗಿದ್ದು, ತಮ್ಮ ಅಘೋಷಿತ ಕಪ್ಪು ಹಣದ ಆದಾಯದ ಮೇಲೆ ಶೇ. 50 ತೆರಿಗೆ ಪಾವತಿಸಬೇಕಾಗುವುದು. ಅಲ್ಲದೆ ಹೆಚ್ಚುವರಿಯಾಗಿ ಶೇ.10ರ ದಂಡ ಮತ್ತು ಶೇ.33ರ ಪ್ರಮಾಣದಲ್ಲಿ ಪಿಎಂಜಿಕೆ ಸೆಸ್‌ (ಎಂದರೆ ಇದು ಶೇ.30ರ ಮೇಲಿನ ಶೇ.33 ಪ್ರಮಾಣ) ಪಾವತಿಸಬೇಕಾಗುವುದು ಎಂದು ಜೇಟ್ಲಿ ತಿಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com