ಕಪ್ಪು ಹಣ ಬಿಳಿ: ಭೀಮಾ ನಾಯಕ್ ಸೇರಿ ಐವರು ಸರ್ಕಾರಿ ಅಧಿಕಾರಿಗಳ ಮೇಲೆ ಎಸಿಬಿ ದಾಳಿ

ಕರ್ನಾಟಕ ಗೃಹ ಮಂಡಳಿಯ ವಿಶೇಷ ಭೂಸ್ವಾಧೀನ ಅಧಿಕಾರಿ ಎಲ್ ಭೀಮಾ ನಾಯಕ್ ಸೇರಿದಂತೆ ಐದು ಸರ್ಕಾರಿ ಅಧಿಕಾರಿಗಳ ಮೇಲೆ ಭ್ರಷ್ಟಾಚಾರ ವಿರೋಧಿ ದಳ (ಎಸಿಬಿ) ದಾಳಿ ನಡೆಸಿದೆ.
ಕಲ್ಬುರ್ಗಿಯಲ್ಲಿ ಸಂಬಂಧಿಕರ ಮನೆಯಿಂದ ಭಾನುವಾರ ಕೆ ಎ ಎಸ್ ಅಧಿಕಾರಿ ಭೀಮಾ ನಾಯಕ್ ಅವರನ್ನು ಬಂಧಿಸಿದ ಸಂದರ್ಭ
ಕಲ್ಬುರ್ಗಿಯಲ್ಲಿ ಸಂಬಂಧಿಕರ ಮನೆಯಿಂದ ಭಾನುವಾರ ಕೆ ಎ ಎಸ್ ಅಧಿಕಾರಿ ಭೀಮಾ ನಾಯಕ್ ಅವರನ್ನು ಬಂಧಿಸಿದ ಸಂದರ್ಭ
ಬೆಂಗಳೂರು: ಕರ್ನಾಟಕ ಗೃಹ ಮಂಡಳಿಯ ವಿಶೇಷ ಭೂಸ್ವಾಧೀನ ಅಧಿಕಾರಿ ಎಲ್ ಭೀಮಾ ನಾಯಕ್ ಸೇರಿದಂತೆ ಐದು ಸರ್ಕಾರಿ ಅಧಿಕಾರಿಗಳ ಮೇಲೆ ಭ್ರಷ್ಟಾಚಾರ ವಿರೋಧಿ ದಳ (ಎಸಿಬಿ) ದಾಳಿ ನಡೆಸಿದೆ. ಆತ್ಮಹತ್ಯೆ ಮಾಡಿಕೊಂಡ ನಾಯಕ್ ಅವರ ಕಾರುಚಾಲಕ ರಮೇಶ್, ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಗಾಲಿ ಜನಾರ್ಧನ್ ರೆಡ್ಡಿ ಅವರ ೧೦೦ ಕೋಟಿ ಕಪ್ಪು ಹಣವನ್ನು ಬಿಳಿ ಮಾಡಲು, ನೋಟು ಹಿಂಪಡೆತ ನಿರ್ದಾರದ ನಂತರ ಈ ಅಧಿಕಾರಿ ಸಹಕರಿಸಿದ್ದರು ಎಂದು ಡೇಟ್ ನೋಟ್ ನಲ್ಲಿ ಆರೋಪಿಸಿದ್ದರು. 
ಕೆ ಆರ್ ಸರ್ಕಲ್ ನ ಪಿ ಡಬ್ಯು ಡಿ ಕಾರ್ಯಕಾರಿ ಎಂಜಿನಿಯರ್ ಆರ್ ಶಿವರಾಮು, ಕಲ್ಬುರ್ಗಿಯ ಪಂಚಾಯತ್ ರಾಜ್ ಎಂಜಿನಿಯರಿಂಗ್ ನ ಸಹಾಯಕ ಎಂಜಿನಿಯರ್ ಶಿವಲಿಂಗಪ್ಪ, ತುಮಕೂರಿನ ಕೊರಟಗೆರೆಯ ಅರಣ್ಯ ಅಧಿಕಾರಿ ಡಿ ನರಸಿಂಹ ಮೂರ್ತಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಪಶುಸಂಗೋಪನಾ ಆರೋಗ್ಯ ಅಧಿಕಾರಿ ಎಚ್ ಎಂ ಶಿವಪ್ರಸಾದ್ ಇವರ ಗೃಹ ಮತ್ತು ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. 
ಕಲಬುರ್ಗಿಯ ಸಹಾಯಕ ಎಂಜಿನಿಯರ್ ಶಿವಲಿಂಗಪ್ಪ ಅವರ ಬಳಿ ಕೋಟ್ಯಾಂತರ ರುಪಾಯಿ ಅಕ್ರಮ ಆಸ್ತಿ ಪತ್ತೆಯಾಗಿದ್ದು, 400 ಗ್ರಾಂ ಚಿನ್ನಾಭರಣ, 22 ಎಕರೆ ಜಮೀನು, ಒಂದು ನಿವೇಶನ, 1 ಕೋಟಿ ರುಪಾಯಿ ಮೌಲ್ಯದ ಮನೆ, ಒಂದು ಕಾರು, ಒಂದು ಬೈಕ್ ಸೇರಿದಂತೆ ಒಟ್ಟು 393 ಕೋಟಿ ರುಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.
ಈ ದಾಳಿಗಳ ವೇಳೆಯಲ್ಲಿ ಈ ಅಧಿಕಾರಿಗಳ ಬಳಿಯಿದ್ದ ಅನುಪಾತ ಮೀರಿದ ಆಸ್ತಿ ಹೊಂದಿರುವ ದಾಖಲೆಗಳನ್ನು ಎಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. 
ಇವರು ಮಿತಿಮೀರಿ ತಪ್ಪು ಮಾರ್ಗಗಳಲ್ಲಿ ಸಂಪಾದಿಸಿರುವ ಆಸ್ತಿಯನ್ನು ವಶಪಡಿಸಿಕೊಳ್ಳಲು ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಕೂಡ ತಿಳಿಸಲಾಗಿದೆ. 
ಕೆ ಸಿ ರಮೇಶ್ ಆತ್ಮಹತ್ಯೆ ಹಿನ್ನಲೆಯಲ್ಲಿ ಬರೆದಿಟ್ಟ ಡೇಟ್ ನೋಟ್ ಆಧಾರದ ಮೇಲೆ ಭೀಮಾ ನಾಯಕ ಅವರನ್ನು ಈಗಗಾಲೇ ಬಂಧಿಸಲಾಗಿದ್ದು, ಸಿಐಡಿ ತನಿಖೆ ನಡೆಸುತ್ತಿರುವುದನ್ನು ಸ್ಮರಿಸಬಹುದು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com