ಚೈನಾ ಸಂಸ್ಥೆ ಪೇಟಿಎಂಗೆ ಮೋದಿ ಜಾಹಿರಾತು ನೀಡುತ್ತಿದ್ದಾರೆ: ಲಾಲು
ಚೈನಾ ಸಂಸ್ಥೆಯೊಂದು ಹೂಡಿಕೆ ಮಾಡಿರುವ ಪೇಟಿಎಂಗೆ ಬಹಿರಂಗವಾಗಿ ಜಾಹಿರಾತು ನೀಡಿದ್ದಾರೆ ಎಂದು ದೂರಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಆರ್ ಜೆ ಡಿ ಪಕ್ಷದ ಅಧ್ಯಕ್ಷ ಲಾಲು ಪ್ರಸಾದ್ ಯಾದವ್
ಪೇಟಿಎಂಗೆ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದ ಪ್ರಧಾನಿ ಮೋದಿ ಭಾವಚಿತ್ರ
ಪಾಟ್ನಾ: ಚೈನಾ ಸಂಸ್ಥೆಯೊಂದು ಹೂಡಿಕೆ ಮಾಡಿರುವ ಪೇಟಿಎಂಗೆ ಬಹಿರಂಗವಾಗಿ ಜಾಹಿರಾತು ನೀಡಿದ್ದಾರೆ ಎಂದು ದೂರಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಆರ್ ಜೆ ಡಿ ಪಕ್ಷದ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ವಾಗ್ದಾಳಿ ನಡೆಸಿದ್ದಾರೆ.
"ಚೈನಾ ಸಂಸ್ಥೆ ಜಾಹಿರಾತು ನೀಡಿ ಪೇಟಿಎಂ ಮಾಡಿ ಎಂದು ಹೇಳಿದ ಬೇರೆ ಯಾವ ಪ್ರಧಾನಿ ಯಾರಾದರೂ ಇದ್ದಾರೆಯೇ" ಎಂದು ಲಾಲು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಪೆಟಿಎಂ ಎಂದು ಮೋದಿ ಹೇಳಿದ್ದರ ಅರ್ಥ ಪೇ ಟು ಮಿ (ನನಗೆ ಪಾವತಿಸಿ) ಎಂದು ಕೂಡ ಮಾಜಿ ಬಿಹಾರ ಮುಖ್ಯಮಂತ್ರಿ ಹೇಳಿದ್ದಾರೆ.
ಪೇಟಿಎಂ ನಲ್ಲಿ ಚೈನಾ ಸಂಸ್ಥೆ ಅಲಿಬಾಬ ೪೦% ಷೇರುಗಳನ್ನು ಹೊಂದಿದ್ದು, ಈ ಮೊಬೈಲ್ ಆಪ್ ಅನ್ನು ನೋಟು ರದ್ದತಿಯ ನಂತರ ಬಹಳಷ್ಟು ಜನ ಬಳಸುತ್ತಿದ್ದಾರೆ.
"ಪ್ರಧಾನಿ ಅವರ ಹುದ್ದೆ ಘನತೆ ಮತ್ತು ಗೌರವದಿಂದ ಕೂಡಿರುತ್ತದೆ" ಎಂದು ಕೂಡ ಲಾಲು ಹೇಳಿದ್ದಾರೆ. ಈ ಹಿಂದೆ ಕೂಡ ನೋಟು ರದ್ಧತಿಯಿಂದ ಉಂಟಾಗಿರುವ ಅವ್ಯವಸ್ಥೆಗೆ ದೇಶದಾದ್ಯಂತ ೧೦೦ ಕ್ಕೂ ಹೆಚ್ಚು ಜನ ಮೃತಪಟ್ಟಿರುವುದಕ್ಕೆ ಮೋದಿ ಅವರನ್ನು ಲಾಲು ದೂಷಿಸಿದ್ದರು.
ಡಿಸೆಂಬರ್ ೨೮ ರಂದು ಪ್ರತಿಭಟನೆ ಮಾಡಿ ಬೃಹತ್ ರ್ಯಾಲಿ ನಡೆಸುವುದಾಗಿ ಕೂಡ ಲಾಲು ಹೇಳಿದ್ದಾರೆ.