ಮೀಸಲಾತಿಗೆ ಆಗ್ರಹಿಸಿ ಕಾಪು ನಾಯಕ ಮುದ್ರಗಡ ಪದ್ಮನಾಭಂರಿಂದ ಉಪವಾಸ ಸತ್ಯಾಗ್ರಹ

ಕಾಪು ಸಮುದಾಯಕ್ಕೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಮೀಸಲಾತಿ ದೊರಕಿಸಬೇಕೆಂದು ಆಗ್ರಹಿಸಿ ಕಾಪು ನಾಯಕ ಮುದ್ರಗಡ...
ಮುದ್ರಗಡ ಪದ್ಮನಾಭಂ ಹಾಗೂ ಕುಟುಂಬ ಸದಸ್ಯರು
ಮುದ್ರಗಡ ಪದ್ಮನಾಭಂ ಹಾಗೂ ಕುಟುಂಬ ಸದಸ್ಯರು
ಕಿರಲಂಪುಡಿ, ಆಂಧ್ರಪ್ರದೇಶ: ಕಾಪು ಸಮುದಾಯಕ್ಕೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಮೀಸಲಾತಿ ದೊರಕಿಸಬೇಕೆಂದು ಆಗ್ರಹಿಸಿ ಕಾಪು ನಾಯಕ ಮುದ್ರಗಡ ಪದ್ಮನಾಭಂ ಅವರು ಶುಕ್ರವಾರದಿಂದ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಆಂಧ್ರ ಪ್ರದೇಶ ಸರ್ಕಾರ ಸಮುದಾಯದ ಬೇಡಿಕೆ ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಪದ್ಮನಾಭಂ ಅವರು, ತಮ್ಮ ನಿವಾಸದಲ್ಲಿ ಇಂದು ಬೆಳಗ್ಗೆ 8.30ರಿಂದ ಕುಟುಂಬ ಸದಸ್ಯರೊಂದಿಗೆ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
60 ವರ್ಷದ ಪದ್ಮನಾಭಂ ಅವರು, ಸರ್ಕಾರ ಯಾವುದೇ ವಿಳಂಬ ಮಾಡದೇ ಈ ಕೂಡಲೇ ಕಾಪು ಸಮುದಾಯಕ್ಕೆ ಒಬಿಸಿ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ. 
ನಿನ್ನೆ ರಾತ್ರಿಯೇ ರಾಜ್ಯ ಸರ್ಕಾರದ ಪ್ರತಿನಿಧಿ, ಶಾಸಕರಾದ ಬೊಂಡ ಉಮಾಮೇಶ್ವರ ರಾವ್, ಜ್ಯೋತುಲಾ ನೆಹರು ಮತ್ತು ಬೊಡ್ಡ ಭಾಸ್ಕರ್ ರಾಮರಾವ್ ಅವರು ಉಪವಾಸ ಸತ್ಯಾಗ್ರಹ ನಡೆಸದಂತೆ ಪದ್ಮನಾಭಂ ಅವರನ್ನು ಮನವೊಲಿಸಲು ಯತ್ನ ನಡೆಸಿ ವಿಫಲವಾಗಿದ್ದಾರೆ.
ಮೀಸಲಾತಿ ಆಗ್ರಹಿಸಿ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಭಾರೀ ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದ ಕಾಪು ಸಮುದಾಯದ ನಾಯಕರು, ಕಾಪು ಜನಾಂಗವನ್ನು ಹಿಂದೂಳಿದ ವರ್ಗಗಳ ಪಟ್ಟಿಗೆ ಸೇರಿಸುವುದಾಗಿ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆದಿದ್ದರು. ಆದರೆ ಇದುವರೆಗೂ ಬೇಡಿಕೆ ಈಡೇರಿಸದ ಸರ್ಕಾರದ ವಿರುದ್ಧ ಮತ್ತೆ ಪ್ರತಿಭಟನೆ ಆರಂಭಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com