ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಳೆದ ವಾರ 245 ಗ್ರಾಮಗಳಿಗೆ ವಿದ್ಯುತ್ ಸೌಲಭ್ಯ: ಕೇಂದ್ರ

ದೀನ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯಡಿ ಭಾರತದ ೨೪೫ ಗ್ರಾಮಗಳಿಗೆ ಫೆಬ್ರವರಿ ಮೊದಲ ವಾರದಲ್ಲಿ ವಿದ್ಯುಚ್ಛಕ್ತಿಯನ್ನು ಒದಗಿಸಲಾಗಿದೆ ಎಂದು ಕೇಂದ್ರ
Published on

ನವದೆಹಲಿ: ದೀನ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯಡಿ ಭಾರತದ ೨೪೫ ಗ್ರಾಮಗಳಿಗೆ ಫೆಬ್ರವರಿ ಮೊದಲ ವಾರದಲ್ಲಿ ವಿದ್ಯುಚ್ಛಕ್ತಿಯನ್ನು ಒದಗಿಸಲಾಗಿದೆ ಎಂದು ಕೇಂದ್ರ ಇಂಧನ ಸಚಿವಾಲಯ ಸೋಮವಾರ ತಿಳಿಸಿದೆ.

"ಹೊಸದಾಗಿ ವಿದ್ಯುಚ್ಛಕ್ತಿ ಒದಗಿಸಿರುವ ಈ ಹಳ್ಳಿಗಳ ಪೈಕಿ ೮೨ ಗ್ರಾಮಗಳು ಅಸ್ಸಾಂ, ೭೭ ಒರಿಸ್ಸಾ, ೬೯ ಜಾರ್ಖಂಡ, ೧೩ ಚತ್ತೀಸ್ ಘರ್, ೨ ತ್ರಿಪುರಾ ಮತ್ತು ೨ ಮಧ್ಯಪ್ರದೇಶ ರಾಜ್ಯಗಳಿಗೆ ಸೇರಿವೆ" ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

೨೦೧೫-೨೦೧೬ ರಲ್ಲಿ ಒಟ್ಟು ೫೦೨೭ ಗ್ರಾಮಗಳಿಗೆ ವಿದ್ಯುಚ್ಛಕ್ತಿ ಒದಗಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.

ಇಲ್ಲಿಯವರೆಗೂ ವಿದ್ಯುಚ್ಛಕ್ತಿ ಇಲ್ಲದ ೧೮,೪೫೨ ಗ್ರಾಮಗಳಿಗೆ ವಿದ್ಯುತ್ ನೀಡುವ ಯೋಜನೆಯನ್ನು ಮೇ ೧ ೨೦೧೮ರೊಳಗೆ ಸಂಪೂರ್ಣಗೊಳಿಸುವುದಾಗಿ ಸರ್ಕಾರ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com