ನವದೆಹಲಿ: 26/11 ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಸೆಷನ್ಸ್ ಕೋರ್ಟ್ ಸೋಮವಾರ ನಡೆಸುತ್ತಿರುವ ವಿಡಿಯೋ ಕಾನ್ಫರೆನ್ಸ್ ನಲ್ಲಿ ಉಗ್ರ ಡೇವಿಡ್ ಹೆಡ್ಲಿ ತಪ್ಪೊಪ್ಪಿಕೊಂಡಿದ್ದಾನೆ.
ಅಲ್ಲದೇ, ದಾಳಿಗೆ ಸಂಚು ರೂಪಿಸಿದ ಬಗ್ಗೆಯೂ ಬಾಯ್ಬಿಟ್ಟಿದ್ದಾನೆ. ವೀಡಿಯೋ ಕಾನ್ಫರೆನ್ಸ್ ನಲ್ಲಿ ಹೆಡ್ಲಿಯ ಪ್ರಮುಖ ಹೇಳಿಕೆಗಳು ಹೀಗಿವೆ...
1. 26/11 ಗೂ ಮುನ್ನವೇ ಎರಡು ಬಾರಿ ದಾಳಿಗೆ ಯತ್ನಿಸಿದ್ದೇವು. ಸೆಪ್ಟೆಂಬರ್ ಮತ್ತು ಅಕ್ಟೋಬರ್ ನಲ್ಲಿ ದಾಳಿಗೆ ಯತ್ನಿಸಿದ್ದೆವು
2. ಮೊದಲ ಬಾರಿಗೆ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಲಷ್ಕರ್ ಇ ತೋಯ್ಬಾ ಮುಖ್ಯಸ್ಥ ಹಫೀಜ್ ಸಯೀದ್ ಹೆಸರು ಪ್ರಸ್ತಾಪಿಸಿದ ಹೆಡ್ಲಿ, ಹಫೀಜ್ ಭಾಷಣದಿಂದ ಸ್ಫೂರ್ತಿಗೊಂಡಿದ್ದೆ ಎಂದು ತಿಳಿಸಿದ್ದಾನೆ. ಅಲ್ಲದೇ ಹಫೀಜ್ ಸಯೀದ್ ಭಾವಚಿತ್ರವನ್ನು ಗುರುತಿಸಿದ್ದಾನೆ.
3. ಮುಂಬೈ ದಾಳಿಗೂ ಮುನ್ನ 8 ಬಾರಿ ಭಾರತಕ್ಕೆ ಭೇಟಿ ನೀಡಿದ್ದೆ
4. ಮುಂಬೈ ದಾಳಿ ನಡೆದ ನಂತರ 2009ರಲ್ಲೂ ಭಾರತಕ್ಕೆ ಭೇಟಿ ನೀಡಿದ್ದೆ
5. ಭಾರತದ ವೀಸಾ ಪಡೆಯಲು 8 ಬಾರಿಯೂ ತಪ್ಪು ಮಾಹಿತಿ ನೀಡಿದ್ದೇನೆ ಎಂದು ಒಪ್ಪಿಕೊಂಡ ಹೆಡ್ಲಿ
6. ಎಲ್ ಇಟಿ ಉಗ್ರ ಸಂಘಟನೆಯ ಮುಖಂಡ ಸಾಜಿದ್ ಮಿರ್ ನೊಂದಿಗೆ ಸಂಪರ್ಕದಲ್ಲಿದ್ದೆ
7. ದಾವೂದ್ ಗಿಲಾನಿ ಹೆಸರನ್ನು ಡೇವಿಡ್ ಹೆಡ್ಲಿ ಎಂದು 2006ರಲ್ಲಿ ಬದಲಾಯಿಸಿಕೊಂಡೆ. ಇದರಿಂದಾಗಿ ಐದು ವರ್ಷಗಳ ವೀಸಾ ಪಡೆದು ಭಾರತದಲ್ಲಿ ವ್ಯಾಪಾರ ಮಾಡಬೇಕೆಂದಿದ್ದೆನು.
8. ಮುಂಬೈ ದಾಳಿ ನಡೆಸಲು ಐಎಸ್ ಐ ನ ಮೇಜರ್ ಇಕ್ಬಾಲ್ ಹಣ ನೀಡಿದ್ದರು
9. ಎಲ್ ಇಟಿ ಸಂಘಟನೆಯ ಲಾಹೋರ್ ಘಟಕದ ಮುಖ್ಯಸ್ಥ ಸಾಜಿದ್ ಮಿರ್ ಭಾರತದ ಪಾಸ್ ಪೋರ್ಟ್ ಪಡೆಯಲು ಸಹಾಯ ಮಾಡಿದರು
10. ಹಫೀಜ್ ಸಯೀದ್ ಭಾಷಣದಿಂದ ಪ್ರಭಾವಿತನಾಗಿ ಎಲ್ ಇಟಿ ಸಂಘಟನೆಗೆ ಸೇರ್ಪಡೆಗೊಂಡೆ.
11. ಲಾಹೋರ್ ನಲ್ಲಿ ಇಕ್ಬಾಲ್ ನನ್ನು ಭೇಟಿಯಾಗಿದ್ದೆ. ಅಲ್ಲದೇ, 2002ರಲ್ಲಿ ಪಾಕಿಸ್ತಾನದಲ್ಲಿರುವ ಮುಜಫರಾಬಾದ್ ನ ಉಗ್ರರ ತರಬೇತಿ ಕೇಂದ್ರದಲ್ಲಿ ಹಫೀಜ್ ಸಯೀದ್ ಭೇಟಿಯಾಗಿದ್ದೆ.