ಹನುಮಂತಪ್ಪ ಕೊಪ್ಪದ್ ಅಂತ್ಯಕ್ರಿಯೆ
ಪ್ರಧಾನ ಸುದ್ದಿ
ಮಣ್ಣಲ್ಲಿ ಮಣ್ಣಾದ ವೀರಯೋಧ ಹನುಮಂತಪ್ಪ ಕೊಪ್ಪದ್
ಸಕಲ ಸರ್ಕಾರಿ ಗೌರವಗಳೊಂದಿಗೆ ಸಿಯಾಚಿನ್ ಹೀರೋ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಅಂತ್ಯಕ್ರಿಯೆ ಬೆಟದೂರಿನಲ್ಲಿ ನೆರವೇರಿತು...
ಬೆಟದೂರು(ಧಾರವಾಡ): ಸಕಲ ಸರ್ಕಾರಿ ಗೌರವಗಳೊಂದಿಗೆ ಸಿಯಾಚಿನ್ ಹೀರೋ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಅಂತ್ಯಕ್ರಿಯೆ ಬೆಟದೂರಿನಲ್ಲಿ ನೆರವೇರಿತು.
ಹನುಮಂತಪ್ಪನವರ ಸ್ವಗ್ರಾಮ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬೆಟದೂರಿನಲ್ಲಿ ವೀರಶೈವ ಸಂಪ್ರದಾಯದಂತೆ ಕೊಪ್ಪದ್ ಅಂತ್ಯಕ್ರಿಯೆ ನೆರವೇರಿತು. ಅಂತ್ಯಕ್ರಿಯೆಯಲ್ಲಿ ಕುಟುಂಬಸ್ಥರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಸೇನಾಧಿಕಾರಿಗಳು, ರಾಜಕೀಯ ಮುಖಂಡರು ಭಾಗಿಯಾಗಿದ್ದರು. ಕೊಪ್ಪದ್ ಅಂತ್ಯಕ್ರಿಯೆಯಲ್ಲಿ ಸಾಗರೋಪಾಧಿಯಲ್ಲಿ ಜನ ಸೇರಿದ್ದರು.
ಅಂತ್ಯಕ್ರಿಯೆಗೂ ಮುನ್ನ ಕುಶಾಲತೋಪು ಸಿಡಿಸಿ ಭಾರತೀಯ ಸೇನೆ ಗೌರವ ಸಲ್ಲಿಸಿತು. ಭಾರತ್ ಮಾತಾಕೀ ಜೈ, ಹನುಮಂತಪ್ಪ ಅಮರ್ ರಹೇ ಎಂದು ಸಾರ್ವಜನಿಕರು ಘೋಷಣೆಗಳನ್ನು ಕೂಗಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ