
ಮುಂಬೈ: ಮುಂಬೈ ಕೋರ್ಟ್ ನಲ್ಲಿ ವಿಚಾರಣೆ ಎದುರಿಸುತ್ತಿರುವ ಪಾಕಿಸ್ತಾನಿ- ಅಮೇರಿಕನ್ ಉಗ್ರ ಡೇವಿಡ್ ಹೆಡ್ಲಿ ದಿನಕ್ಕೊಂದು ಆಘಾತಕಾರಿ ಮಾಹಿತಿ ಹೊರಗಿಡುತ್ತಿದ್ದಾನೆ.
ಫೆ.12 ರಂದೂ ವಿಚಾರಣೆ ಎದುರಿಸಿದ ಹೆಡ್ಲಿ ಲಷ್ಕರ್ ಹಾಗೂ ಅಲ್ ಖೈದಾ ಉಗ್ರರ ಹಿಟ್ ಲಿಸ್ಟ್ ನಲ್ಲಿ ನವದೆಹಲಿಯ ರಾಷ್ಟ್ರೀಯ ರಕ್ಷಣಾ ಕಾಲೇಜು ಸಹ ಇತ್ತೆಂದು ಹೇಳಿಕೆ ನೀಡಿದ್ದಾರೆ. 2007 ರಲ್ಲಿ ರಕ್ಷಣಾ ಕಾಲೇಜು ಕ್ಯಾಂಪಸ್ ಗೂ ಭೇಟಿ ನೀಡಿದ್ದಾಗಿ ತಿಳಿಸಿರುವ ಹೆಡ್ಲಿ ಎನ್ ಡಿಸಿಯನ್ನು ಪ್ರತಿಷ್ಠಿತ ಕಾಲೇಜೆಂದು ಉಗ್ರ ಸಂಘಟನೆಗಳು ಪರಿಗಣಿಸಿದ್ದವು ಎಂದು ಹೇಳಿದ್ದಾನೆ.
2008 ರ ದಾಳಿಯ ನಂತರ ಮತ್ತೊಮ್ಮೆ ರಾಷ್ಟ್ರೀಯ ರಕ್ಷಣಾ ಕಾಲೇಜ್ ಕ್ಯಾಂಪಸ್, ಗೋವಾದಲ್ಲಿರುವ ಚಬಾದ್ ಹೌಸ್, ಪುಣೆಗೆ ಭೇಟಿ ನೀಡಿದ್ದಾಗಿ ಹೆಡ್ಲಿ ವಿಚಾರಣೆ ವೇಳೆ ತಿಳಿಸಿದ್ದಾನೆ.
Advertisement