ಜೆ ಎನ್ ಯು ವಿದ್ಯಾರ್ಥಿಗಳು ಮತ್ತು ಪತ್ರಕರ್ತರ ಮೇಲೆ ಹಲ್ಲೆ ಮಾಡಿದ ವಕೀಲರು

ರಾಷ್ಟ್ರದ್ರೋಹ ಆರೋಪದ ಮೇಲೆ ಬಂಧಿತರಾಗಿರುವ ಜವಾಹಾರ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷ ಕನ್ಹಯ ಕುಮಾರ್ ಅವರನ್ನು ಪಟಿಯಾಲ
ಕನ್ಹಯ ಕುಮಾರ್
ಕನ್ಹಯ ಕುಮಾರ್

ನವದೆಹಲಿ: ರಾಷ್ಟ್ರದ್ರೋಹ ಆರೋಪದ ಮೇಲೆ ಬಂಧಿತರಾಗಿರುವ ಜವಾಹಾರ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷ ಕನ್ಹಯ ಕುಮಾರ್ ಅವರನ್ನು ಪಟಿಯಾಲ ಹೌಸ್ ಕೋರ್ಟ್ ಆವರಣಕ್ಕೆ ಕರೆತಂದಾಗ ವಕೀಲರ ಒಂದು ವರ್ಗ ಜೆ ಎನ್ ಯು ವಿದ್ಯಾರ್ಥಿಗಳು ಮತ್ತು ಪತ್ರಕರ್ತರ ಮೇಲೆ ಹಲ್ಲೆ ಮಾಡಿರುವುದಾಗಿ ತಿಳಿದುಬಂದಿದೆ.

ಪ್ರತಿಭಟನಾ ನಿರತ ವಕೀಲರು 'ಭಾರತ ಮಾತಾ ಕಿ ಜೈ' ಎಂಬ ಘೋಷಣೆ ಕೂಗಿಕೊಂಡು ಕೋರ್ಟ್ ಆವರಣದಿಂದ ಜೆ ಎನ್ ಯು ವಿದ್ಯಾರ್ಥಿಗಳನ್ನು ಹೊರಹಾಕಬೇಕೆಂದು ಆಗ್ರಹಿಸಿದಾಗ ಉದ್ವಿಗ್ನತೆ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.

ಆಗ ವಕೀಲರ ಒಂದು ವರ್ಗ ದಾಳಿಕೋರ ವಕೀಲರಿಂದ ಪತ್ರಕರ್ತರನ್ನು ಮತ್ತು ವಿದ್ಯಾರ್ಥಿಗಳನ್ನು ರಕ್ಷಿಸಲು ಮುಂದಾಯಿತು ಎಂದು ತಿಳಿದುಬಂದಿದೆ.

'ಭಾರಕಕ್ಕೆ ಜೈ, ಜೆ ಎನ್ ಯು ಗೆ ಧಿಕ್ಕಾರ' ಎಂದು ಕೂಗುತ್ತಿದ್ದ ಕೆಲವು ವಕೀಲರು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿ ಹೊರಗೆ ನೂಕಲು ಪ್ರಯತ್ನಿಸಿದರು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com