ನಕ್ಸಲರಿಗೆ ಆಶ್ರಯ ನೀಡುತ್ತಿದ್ದ ಆರೋಪ: ಡಿಎಸ್ ಯು ಸಂಘಟನೆ ಮೇಲೆ ನಿಗಾ ಇರಿಸಿದ್ದ ಯುಪಿಎ ಸರ್ಕಾರ

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಡಿಎಸ್ ಯು ವಿದ್ಯಾರ್ಥಿ ಸಂಘಟನೆಯ ಚಟುವಟಿಕೆಗಳ ಮೇಲೆ ನಿಗಾ ಇರಿಸಿತ್ತು.
ಜೆಎನ್ ಯು ವಿದ್ಯಾರ್ಥಿಗಳ ಬಂಧನ ಖಂಡಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿ (ಸಂಗ್ರಹ ಚಿತ್ರ)
ಜೆಎನ್ ಯು ವಿದ್ಯಾರ್ಥಿಗಳ ಬಂಧನ ಖಂಡಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿ (ಸಂಗ್ರಹ ಚಿತ್ರ)

ನವದೆಹಲಿ: ದೇಶವಿರೋಧಿ ಘೋಷಣೆ ಕೂಗಿದ್ದ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಯೂನಿಯನ್( ಡಿಎಸ್ ಯು) ಸಂಘಟನೆ ವಿದ್ಯಾರ್ಥಿಗಳ ಬಂಧನವನ್ನು ರಾಹುಲ್ ಗಾಂಧಿ ವಿರೋಧಿಸಿದ್ದಾರೆ. ಆದರೆ ಅವರು ಉಪಾಧ್ಯಕ್ಷರಾಗಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಇದೇ ವಿದ್ಯಾರ್ಥಿ ಸಂಘಟನೆಯ ಚಟುವಟಿಕೆಗಳ ಮೇಲೆ ನಿಗಾ ಇರಿಸಿತ್ತು.
ಡಿಎಸ್ ಯು ಸಂಘಟನೆ ವಿರುದ್ಧ ನಕ್ಸಲರಿಗೆ ಆಶ್ರಯ ನೀಡುತ್ತಿದ್ದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಡಿಎಸ್ ಯು ವಿದ್ಯಾರ್ಥಿ ಸಂಘಟನೆya ಮೇಲೆ ಯುಪಿಎ ಸರ್ಕಾರ ಹದ್ದಿನ ಕಣ್ಣಿರಿಸಿತ್ತು. ಫೆ.9 ರಂದು ದೇಶ ವಿರೋಧಿ ಘೋಷಣೆ ಕೂಗಿದ ಆರೋಪ ಹೊತ್ತಿರುವ ಡಿಎಸ್ ಯು ವಿದ್ಯಾರ್ಥಿ ಸಂಘಟನೆ ಪರ ನಿಂತಿರುವ ಕಾಂಗ್ರೆಸ್ ಗೆ ಇದು ಮುಜುಗರ ಉಂಟು ಮಾಡುವ ಅಂಶವಾಗಿದೆ.
2014 ರಲ್ಲಿ ಡಿಎಸ್ ಯು ವಿದ್ಯಾರ್ಥಿ ಸಂಘಟನೆ ಬಗ್ಗೆ ಮಾಹಿತಿ ನೀಡಿದ್ದ ಯುಪಿಎ ಸರ್ಕಾರ, ವೃತ್ತಿಪರ ಕ್ರಾಂತಿಕಾರಿಗಳನ್ನು ಭೂಗತ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಡಿಎಸ್ ಯು ಮಾರ್ಗದರ್ಶನ ನೀಡುತ್ತಿದೆ ಎಂದು ಹೇಳಿತ್ತು. 2014 ರ ಫೆ.18 ರಂದು ಡಿಎಸ್ ಯು ವಿದಿಯಾರ್ತಿ ಸಂಘಟನೆ ಬಗ್ಗೆ ಮಾಹಿತಿ ನೀಡಿದ್ದ ಅಂದಿನ ಗೃಹ ಖಾತೆ ರಾಜ್ಯ ಸಚಿವ ಆರ್ ಪಿಎನ್ ಸಿಂಗ್, ಡಿಎಸ್ ಯು ಹಾಗೂ ಇನ್ನಿತರ ಸಂಘಟನೆಗಳು ಸುರಕ್ಷಿತ ಅಡಗುತಾಣಗಳಿಗಾಗಿ ನಗರ ಪ್ರದೇಶಕ್ಕೆ ಬರುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು.
ಬಿಹಾರ, ದೆಹಲಿ, ಜಾರ್ಖಂಡ್ ಗಳಲ್ಲಿ ಡಿಎಸ್ ಯು ಸಕ್ರಿಯವಾಗಿದ್ದು  ಸಿಪಿಐ(ಎಂ) ಹಾಗೂ ಅದರ ಸಹ ಸಂಘಟನೆಗಳ ಚಟುವಟಿಕೆಗಳ ಬಗ್ಗೆ ಸೂಕ್ಷ್ಮವಾದ ನಿಗಾ ಇಡಲಾಗಿದೆ ಎಂದು ಯುಪಿಎ ಸರ್ಕಾರ ಸಂಸತ್ ನಲ್ಲಿ ಹೇಳಿತ್ತು. ಈ ಸಂಘಟನೆಗಳು ಮಾವೋವಾದಿಗಳಿಗೆ ಶಸ್ತ್ರಾಸ್ತ್ರ ಖರೀದಿಗೆ ಅನುಕೂಲ ಮಾಡಿಕೊಡುತ್ತಿವೆ ಎಂದು 2011 ಯುಪಿಎ ಸರ್ಕಾರ ಸಂಸತ್ ನಲ್ಲಿ ತಿಳಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com