ಈ ಪ್ರತಿಭಟನೆಯನ್ನು ನಿಯಂತ್ರಿಸಲು ಭಾರತೀಯ ಸೇನೆಯನ್ನು ಕರೆಯಲಾಗಿದೆ. ಆದರೆ ಎಲ್ಲ ರಸ್ತೆಗಳನ್ನು ಬಂದ್ ಮಾಡಿ ಪ್ರತಿಭಟನಾಕಾರರು ಹಿಂಸಾ ಪ್ರವೃತ್ತಿ ಮುಂದುವರಿಸಿದ್ದಾರೆ. ಸೈನಿಕರು ಹೆಲಿಕಾಪ್ಟರ್ ಮೂಲಕ ಹರ್ಯಾಣಕ್ಕೆ ಕರೆತರಲಾಗಿದ್ದು, 3,300 ಅರೆ ಸೈನಿಕರನ್ನು ಹರ್ಯಾಣದಲ್ಲಿ ನಿಯೋಜಿಸಲಾಗಿದೆ. ರೋಹ್ತಕ್‌ನಲ್ಲಿ ಹರ್ಯಾಣದ ವಿತ್ತ ಸಚಿವ ಅಭಿಮನ್ಯು ಅವರ ವಸತಿ ಮುಂದೆ ಪ್ರತಿಭಟನೆ ನಡೆದಿದ್ದು, ಜನರನ್ನು ಚದುರಿಸಲು ಪೊಲೀಸರು ಗುಂಡು ಹಾರಿಸಿದ್ದಾರೆ. ಈ ಗುಂಡು ಹಾರಾಟದಲ್ಲಿ ಮೂವರು ಸಾವನ್ನಪ್ಪಿದ್ದು, 25 ಮಂದಿಗೆ ತೀವ್ರ ಗಾಯಗಳಾಗಿವೆ. ಇಲ್ಲಿನ ಶೈಕ್ಷಣಿಕ ಸಂಸ್ಥೆಗಳಿಗೆ ಸರ್ಕಾರ ರಜೆ ಘೋಷಿಸಿದೆ.