ಆರ್ ಎಸ್ ಎಸ್ ನಿಷೇಧಿಸಲು ಮಾಜಿ ಮಹಾರಾಷ್ಟ್ರ ಪೊಲೀಸ್ ಅಧಿಕಾರಿ ಆಗ್ರಹ

ಬಲಪಂಥೀಯ ತೀವ್ರವಾದಿಗಳ ಜೊತೆಗೆ ಗುಪ್ತಚರ ಇಲಾಖೆ (ಐ ಬಿ) ನಿಕಟ ಸಂಬಂಧ ಹೊಂದಿದ್ದು, ದೇಶದ ನಂಬರ್ ೧ ಭಯೋತ್ಪಾದಕ ಸಂಸ್ಥೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಸ್ಥೆಯನ್ನು
ಮಹಾರಾಷ್ಟ್ರದ ಮಾಜಿ ಪೊಲೀಸ್ ಮಹಾನಿರ್ದೇಶಕ ಎಸ್ ಎಂ ಮುಶ್ರಿಫ್
ಮಹಾರಾಷ್ಟ್ರದ ಮಾಜಿ ಪೊಲೀಸ್ ಮಹಾನಿರ್ದೇಶಕ ಎಸ್ ಎಂ ಮುಶ್ರಿಫ್

ಕೋಲ್ಕತ್ತ: ಬಲಪಂಥೀಯ ತೀವ್ರವಾದಿಗಳ ಜೊತೆಗೆ ಗುಪ್ತಚರ ಇಲಾಖೆ (ಐ ಬಿ) ನಿಕಟ ಸಂಬಂಧ ಹೊಂದಿದ್ದು, ದೇಶದ ನಂಬರ್ ೧ ಭಯೋತ್ಪಾದಕ ಸಂಸ್ಥೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಸ್ಥೆಯನ್ನು ನಿಷೇಧಿಸಬೇಕು ಎಂದು ಮಹಾರಾಷ್ಟ್ರದ ಮಾಜಿ ಪೊಲೀಸ್ ಮಹಾನಿರ್ದೇಶಕ ಎಸ್ ಎಂ ಮುಶ್ರಿಫ್ ಮಂಗಳವಾರ ಹೇಳಿದ್ದಾರೆ.

"ಆರ್ ಎಸ್ ಎಸ್- ದೇಶದ ಅತಿ ದೊಡ್ಡ ಭಯೋತ್ಪಾದಕ ಸಂಸ್ಥೆ" ಎಂಬ ಹೆಸರಿನ ಬೆಂಗಾಲಿ ಆವೃತ್ತಿಯ ಪುಸ್ತಕದ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಮುಶ್ರಿಫ್, ಜೆ ಎನ್ ಯು ವಿವಾದ ಕೂಡ, ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಘೋಷಿಸಲು ಹುನ್ನಾರ ಹೂಡಿರುವ ಆರ್ ಎಸ್ ಎಸ್ ನವರ ಕೆಲಸ ಎಂದಿದ್ದಾರೆ.

"ಕೇಂದ್ರದಲ್ಲಿ ಯಾವ ಪಕ್ಷ ಆಡಳಿತ ನಡೆಸಿದರೂ ಐ ಬಿ ದೇಶದ ಅತಿ ಶಕ್ತಿಯುತ ಇಲಾಖೆಯಾಗಿ ಮುಂದುವರೆದಿದೆ. ಅದು ತನಗೆ ಬೇಕಾದ ರೀತಿಯಲ್ಲಿಯೇ ಕಾರ್ಯ ನಿರ್ವಹಿಸುತ್ತದೆ.

"ಐ ಬಿ ಹೇಳಿದ್ದೆಲ್ಲಾ, ಮಾಡಿದ್ದೆಲ್ಲಾ ನಿಜ ಎಂದು ನಂಬಲಾಗುತ್ತದೆ, ಅದರ ನಡೆಗಳನ್ನು ಎಂದಿಗೂ ಪ್ರಶ್ನಿಸುವ ಹಾಗಿಲ್ಲ ಮತ್ತು ಪ್ರಮಾಣಿಸುವ ಹಾಗಿಲ್ಲ" ಎಂದಿರುವ ಮುಶ್ರಿಫ್ ಭಯೋತ್ಪಾದಕ ಚಟುವಟಿಕೆಗಳಲ್ಲಿ ಹಿಂದು ತೀವ್ರವಾದಿಗಳ ಪಾತ್ರವನ್ನು ತನಿಖೆ ಮಾಡುತ್ತಿದ್ದ, ಭಯೋತ್ಪಾದನಾ ವಿರೋಧಿ ದಳದ ಮುಖ್ಯಸ್ಥರಾಗಿದ್ದ ಹೇಮಂತ್ ಕರ್ಕರೆ ಅವರನ್ನು ಕೊಲ್ಲಲು ಆರ್ ಎಸ್ ಎಸ್ ಜೊತೆ ಬೇಹುಗಾರಿಕಾ ಸಂಸ್ಥೆ ಕೈಜೋಡಿಸಿತ್ತು" ಎಂದು ಕೂಡ ಆರೋಪಿಸಿದ್ದಾರೆ.

ಮುಂಬೈ ಭಯೋತ್ಪಾದನಾ ದಾಳಿಯ ವೇಳೆಯಲ್ಲಿ ಕರ್ಕರೆ ಅಸು ನೀಗಿದ್ದರು.

"ಆರ್ ಎಸ್ ಎಸ್ ಬಳಸಿರುವಂತೆ ಬೇರೆ ಯಾವ ಭಯೋತ್ಪಾದಕ ಸಂಸ್ಥೆಯೂ ಆರ್ ಡಿ ಎಕ್ಸ್ ಬಳಸಿಲ್ಲ. ಆರ್ ಎಸ್ ಎಸ್ ಮತ್ತು ಅಂಗಸಂಸ್ಥೆಗಳಾದ ಅಭಿನವ್ ಭಾರತ ಮತ್ತು ಭಜರಂಗ ದಳದ ಮೇಲೆ ಭಯೋತ್ಪಾದನಾ ಪ್ರಕರಣದಗಳಲ್ಲಿ ಕನಿಷ್ಟ ೧೮ ಚಾರ್ಜ್ ಶೀಟ್ ಗಳನ್ನು ಹಾಕಲಾಗಿದೆ.

"ಆರ್ ಎಸ್ ಎಸ್ ದೇಶದ ನಂಬರ್ ೧ ಭಯೋತ್ಪಾದನಾ ಸಂಸ್ಥೆಯಾಗಿರುವುದರಿಂದ ಅದನ್ನು ಕೂಡಲೇ ನಿಷೇಧಿಸಬೇಕು" ಎಂದು ಕೂಡ ಮುಶ್ರಿಫ್ ಹೇಳಿದ್ದಾರೆ.

ಜೆ ಎನ್ ಯು ವಿವಾದವನ್ನು ಖಂಡಿಸಿದ ಮುಶ್ರಿಫ್, ಬಲಪಂಥೀಯ ಮೂಲಭೂತವಾದ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

"ಸ್ಮೃತಿಗಳು ಮತ್ತು ವೇದಗಳ ಆಧಾರದ ಮೇಲೆ ಹಿಂದೂ ರಾಷ್ಟ್ರದ ನಿರ್ಮಾಣಕ್ಕೆ ಆರ್ ಎಸ್ ಎಸ್ ಹೂಡಿರುವ ತಂತ್ರ ಇದು. ಈ ಮೂಲಭೂತವಾದದ ಬೆಳವಣಿಗೆಯನ್ನು ವಿರೋಧಿಸಿ ಇಡಿ ದೇಶ ಎದ್ದು ನಿಲ್ಲಬೇಕು" ಎಂದು 'ಕರ್ಕರೆಯನ್ನು ಕೊಂದವರು ಯಾರು?: ಭಾರತದಲ್ಲಿ ಭಯೋತ್ಪಾದನೆಯ ನಿಜಮುಖ" ಪುಸ್ತಕದ ಲೇಖಕ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com