
ನವದೆಹಲಿ: ಬೇಹುಗಾರಿಕಾ ಸಂಸ್ಥೆಗಳಾದ ಐ ಬಿ, ಆರ್ ಎ ಡಬ್ಲ್ಯು ಮತ್ತು ಎನ್ ಟಿ ಆರ್ ಒ ಗಳನ್ನು ಸಂಸತ್ತಿನಲ್ಲಿ ಹೊಣೆಗಾರರನ್ನಾಗಿ ಮಾಡುವುದಕ್ಕೆ ಸಲ್ಲಿಸಿದ್ದ ಸಾರ್ವಜನಿಕ ಅರ್ಜಿಯನ್ನು ವಜಾಗೊಳಿಸಿರುವ ಸುಪ್ರೀಂ ಕೋರ್ಟ್, ಈ ನಡೆ ದೇಶದ ಭದ್ರತೆಗೆ ಧಕ್ಕೆ ತರಬಲ್ಲುದು ಎಂದು ಅಭಿಪ್ರಾಯಪಟ್ಟಿದೆ.
"ಈ ಸಾರ್ವಜನಿಕ ಅರ್ಜಿಗೆ ಮಾನ್ಯತೆ ನೀಡುವುದಕ್ಕೆ ನಮಗೆ ಸಾಧ್ಯವಿಲ್ಲ.. ಗುಪ್ತಚರ ಇಲಾಖೆಗಳ ವಿಷಯದಲ್ಲಿ ನಾವು ತಲೆ ಹಾಕಿದರೆ ದೇಶದ ಭದ್ರತೆಗೆ ಧಕ್ಕೆ ಬರಬಲ್ಲುದು" ಎಂದು ಎನ್ ಜಿ ಒ ಒಂದು ಸಲ್ಲಿಸಿದ್ದ ಸಾರ್ವಜನಿಕ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ಶಿವಕೀರ್ತಿ ಸಿಂಗ್ ಒಳಗೊಂಡ ವಿಭಾಗೀಯ ಪೀಠ ಹೇಳಿದೆ.
ಈ ಸಂಸ್ಥೆಗಳನ್ನು ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಮಾಡಲಾಗುತ್ತಿದೆ ಎಂದು ದೂರಿ ಇವುಗಳನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಎನ್ ಜಿ ಒ ಒಂದು ಪಿ ಐ ಎಲ್ ಸಲ್ಲಿಸಿತ್ತು.
ಎನ್ ಜಿ ಒ ಪರವಾಗಿ ವಾದ ಮಾಡಿದ್ದ ಖ್ಯಾತ ವಕೀಲ ಪ್ರಶಾಂತ್ ಭೂಷಣ್, ವಿಶ್ವದ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಕಾನೂನಿನಡಿಯಲ್ಲಿ ಈ ಬೇಹುಗಾರಿಕೆಯ ಸಂಸ್ಥೆಗಳಿಗೆ ಹೊಣೆಯಿಲ್ಲ ಆದುದರಿಂದ ಜನರಿಗೆ ಅಥಾ ಸಂಸತ್ತಿಗೆ ಅವರು ಬದ್ಧರಾಗಿರುವಂತೆ ಮಾಡುವುದು ಸೂಕ್ತ ಎಂದು ವಾದ ಮಾಡಿದ್ದರು.
Advertisement