
ನವದೆಹಲಿ: ಮಾರ್ಚ್ 1 ರಿಂದ ಕಾಯ್ದಿರಿಸದ ರೈಲು ಟಿಕೆಟ್ ಗಳಿಗೆ ಹೊಸ ನಿಯಮ ಜಾರಿಗೆ ಬರಲಿದೆ. ಹೊಸ ನಿಯಮಗಳ ಪ್ರಕಾರ 199 ಕಿಮಿ ವರೆಗಿನ ದೂರ ಪ್ರಯಾಣಕ್ಕೆ ಪಡೆಯುವ ಟಿಕೆಟ್, ಖರೀದಿಯ ಮೂರು ಗಂಟೆಗಳ ನಂತರ ಸಿಂಧುತ್ವ ಕಳೆದುಕೊಳ್ಳಲಿದೆ.
ಹೊಸ ನಿಯಮದ ಪ್ರಕಾರ 199 ಕಿಮಿ ದೂರದ ವರೆಗಿನ ಪ್ರಯಾಣಕ್ಕಾಗಿ ಟಿಕೆಟ್ ಖರೀದಿಸಿದರೆ, ನಿಗದಿತ ಪ್ರದೇಶಕ್ಕೆ ಮೂರು ಗಂಟೆಗಳ ಒಳಗಾಗಿ ರೈಲು ಪ್ರಯಾಣ ಪ್ರಾರಂಭಿಸಬೇಕು ಎಂದು ಲೋಕಸಭೆಯಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ಮನೋಜ್ ಸಿನ್ಹಾ ಹೇಳಿದ್ದಾರೆ.
199 ಕಿಮಿ ದೂರದ ಪ್ರಯಾಣಕ್ಕಾಗಿ ವಾಪಸ್ ಬರುವ ಟಿಕೆಟ್ ನ್ನು ಮೊದಲೇ ಖರೀದಿ ಮಾಡುವ ಸೌಲಭ್ಯವನ್ನು ರದ್ದುಗೊಳಿಸಲಾಗಿದೆ, ಮೊಬೈಲ್ ಫೋನ್ ಗಳ ಮೂಲಕ ಪೇಪರ್ ರಹಿತ ಪ್ಲ್ಯಾಟ್ ಫಾರ್ಮ್ ಟಿಕೆಟ್ ಪಡೆಯುವ ಸೌಲಭ್ಯ ಈಗಾಗಲೆ 29 ರೈಲು ನಿಲ್ದಾಣಗಳಲ್ಲಿ ಜಾರಿಯಲ್ಲಿದೆ ಎಂದು ಸಿನ್ಹಾ ತಿಳಿಸಿದ್ದಾರೆ.
Advertisement