ರಾಜೀವ್ ಗಾಂಧಿ ಹಂತಕಿ ನಳಿನಿಗೆ ಪೆರೋಲ್

ರಾಜೀವ್ ಗಾಂಧಿ ಅವರನ್ನು ಹತ್ಯೆಗೈದ 7 ಹಂತಕರ ಪೈಕಿ ನಳಿನಿ ಶ್ರೀಹರನ್ ಗೆ 12 ಗಂಟೆಗಳ ಕಾಲ ಪೆರೋಲ್ ನೀಡಲಾಗಿದೆ ಎಂದು...
ರಾಜೀವ್ ಗಾಂಧಿ ಹಂತಕಿ ನಳಿನಿ
ರಾಜೀವ್ ಗಾಂಧಿ ಹಂತಕಿ ನಳಿನಿ
ವೇಲೂರ್: ರಾಜೀವ್ ಗಾಂಧಿ ಅವರನ್ನು ಹತ್ಯೆಗೈದ 7 ಹಂತಕರ ಪೈಕಿ ನಳಿನಿ ಶ್ರೀಹರನ್ ಗೆ 12 ಗಂಟೆಗಳ ಕಾಲ ಪೆರೋಲ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ತಂದೆಯ ಶಂಕರ ನಾರಾಯಣನ್ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ನಳಿನಿಗೆ 12 ಗಂಟೆಗಳ ಪೆರೋಲ್ ನೀಡಲಾಗಿದ್ದು, ಸಂಜೆಯ ವೇಳೆ ಹಿಂತಿರುಗಲಿದ್ದಾರೆ. ನಳಿನಿ ಅವರ ತಂದೆ ತಿರುವನೆಲ್ಲಿಯ ಅಂಬಾಲವನಪುರಂನಲ್ಲಿ ಕಳೆದ ರಾತ್ರಿ ನಿಧರಾಗಿದ್ದಾರೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.
ವೇಲೂರ್ ಸೆಂಟ್ರಲ್ ಜೈಲಿನಿಂದ ಇಂದು ಬೆಳಿಗ್ಗೆ 6.50 ಸುಮಾರಿಗೆ ಪೆರೋಲ್ ಮೇಲೆ ಜೈಲಿನಿಂದ ಪೊಲೀಸ್ ಬೆಂಗಾವಲೊಂದಿಗೆ ಕಳುಹಿಸಿಕೊಡಲಾಗಿದೆ ಎಂದು ಅವರು ಹೇಳಿದ್ದಾರೆ. 
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣ ಅಫರಾಧಿ ನಳಿನಿಗೆ 1998ರಲ್ಲಿ ಜನವರಿ 28ರಂದು ಮರಣದಂಡನೆ ವಿಧಿಸಲಾಗಿತ್ತು. ಆದರೆ, ತಮಿಳುನಾಡು ರಾಜ್ಯಪಾಲರು 2000ನೇ ಏಪ್ರಿಲ್ 24ರಂದು ಜೀವವಾಧಿ ಶಿಕ್ಷೆಯಾಗಿ ಪರಿವರ್ತಿಸಿ ಆದೇಶ ಹೊರಡಿಸಿದ್ದರು.
ನಾನು 24 ವರ್ಷಗಳ ಕಾಲ ಜೈಲಿನಲ್ಲಿದ್ದು ಶಿಕ್ಷೆ ಅನುಭವಿಸಿದ್ದೇನೆ. ಹಾಗಾಗಿ, ನನ್ನನ್ನು ಅವಧಿಗೆ ಮುನ್ನ ಬಿಡುಗಡೆಗೊಳಿಸುವಂತೆ ತಮಿಳುನಾಡು ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿ ನಳಿನಿ ಮದ್ರಾಸ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಳು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com