ವಿಶ್ವದ 20 ಕಂಪನಿಳ ಉಪಕರಣಗಳು ಇಸ್ಲಾಮಿಕ್ ಸ್ಟೇಟ್ ಉಗ್ರರ ಸ್ಫೋಟಕಗಳಿಗೆ ಬಳಕೆ!

ಭಾರತದ 7 ಕಂಪನಿಗಳೂ ಸೇರಿ, ವಿಶ್ವದಾದ್ಯಂತ 20 ಕಂಪನಿಗಳು ತಯಾರು ಮಾಡುವ ಉಪಕರಣಗಳು ಇಸ್ಲಾಮಿಕ್ ಸ್ಟೇಟ್ ಉಗ್ರರ ಸ್ಫೋಟಕಗಳಿಗೆ ಬಳಕೆಯಾಗುತ್ತಿವೆ ಎಂದು ವರದಿಯೊಂದು ಹೇಳಿದೆ.
ಇಸ್ಲಾಮಿಕ್ ಸ್ಟೇಟ್ ಉಗ್ರರು (ಸಂಗ್ರಹ ಚಿತ್ರ)
ಇಸ್ಲಾಮಿಕ್ ಸ್ಟೇಟ್ ಉಗ್ರರು (ಸಂಗ್ರಹ ಚಿತ್ರ)

ಅಂಕರ: ಭಾರತದ 7 ಕಂಪನಿಗಳೂ ಸೇರಿ ವಿಶ್ವದಾದ್ಯಂತ 20 ಕಂಪನಿಗಳು ತಯಾರು ಮಾಡುವ ಉಪಕರಣಗಳು ಇಸ್ಲಾಮಿಕ್ ಸ್ಟೇಟ್ ಉಗ್ರರ ಸ್ಫೋಟಕಗಳಿಗೆ ಬಳಕೆಯಾಗುತ್ತಿವೆ ಎಂದು ವರದಿಯೊಂದು ಹೇಳಿದೆ.
ವಿವಿಧ ಕಂಪನಿಗಳಿಂದ ಸರಬರಾಜಾಗುವ  ರಾಸಾಯನಿಕಗಳು ಹಾಗೂ ಇತರ ಉಪಕರಣಗಳು ಉಗ್ರರ ಸ್ಫೋಟಕಗಳಿಗೆ ಬಳಕೆಯಾಗುತ್ತಿವೆ ಈ ಬಗ್ಗೆ ಸರ್ಕಾರಗಳು ಹಾಗೂ ಕಂಪನಿಗಳು ಎಚ್ಚರಿಕೆ ವಹಿಸಬೇಕು ಎಂದು ವರದಿ ಎಚ್ಚರಿಸಿದೆ.
ಟರ್ಕಿ, ಬ್ರೆಜಿಲ್, ಯುಎಸ್ ಸೇರಿದಂತೆ 51 ದೇಶದ ಕಂಪನಿಗಳು ತಯಾರು ಮಾಡಿರುವ ಅಥವಾ ಮಾರಾಟ ಮಾಡಿರುವ 700 ಕ್ಕೂ ಹೆಚ್ಚು ಉಪಕರಣಗಳನ್ನು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಸುಧಾರಿತ ಸ್ಫೋಟಕ ಸಾಧನಗಳ ತಯಾರಿಕೆಗೆ ಬಳಕೆಯಾಗುತ್ತಿದ್ದು ಭಾರತದ 7 ಸಂಸ್ಥೆಗಳ ಉಪಕರಣಗಳೂ ಸಹ ಇಸ್ಲಾಮಿಕ್ ಉಗ್ರರ ಕೈಸೇರುತ್ತಿದೆ ಎಂದು ವರದಿ ತಿಳಿಸಿದೆ.
ಕಾನ್ ಫ್ಲಿಕ್ಟ್ ಶಸ್ತ್ರಾಸ್ತ್ರ ಸಂಶೋಧನೆಯ 20 ತಿಂಗಳ ಅಧ್ಯಯನ ನಡೆಸಿರುವ ವರದಿ ಪ್ರಕಾರ ಇರಾಕ್ ಹಾಗೂ ಸಿರಿಯಾದೊಂದಿಗೆ ಗಡಿ ಹಂಚಿಕೊಂಡಿರುವ ಟರ್ಕಿ ದೇಶದ 13 ಸಂಸ್ಥೆಗಳು ತಯಾರಿಸುವ ಉಪಕರಣಗಳು ಇಸ್ಲಾಮಿಕ್ ಸ್ಟೇಟ್ ಉಗ್ರರ ಕೈ ಸೇರುತ್ತಿದ್ದು  ಇರಾಕ್ ಹಾಗೂ ಸಿರಿಯಾದಲ್ಲಿರುವ ಸುನ್ನಿ ಗುಂಪಿಗೆ ಶಸ್ತ್ರಾಸ್ತ್ರಗಳ ಹರಿವನ್ನು ಟರ್ಕಿ ತಡೆಗಟ್ಟಲು ಹೆಚ್ಚಿನ ಭದ್ರತೆ ಕೈಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com