ಕರೆ ಕಡಿತಕ್ಕೆ ಪರಿಹಾರ; ಟಿ ಆರ್ ಎ ಐ ಆದೇಶವನ್ನು ಎತ್ತಿಹಿಡಿದ ಹೈಕೋರ್ಟ್

ಮಾತಿನ ಮಧ್ಯದಲ್ಲಿ ದೂರವಾಣಿ ಕರೆ ಕಡಿತಗೊಂಡರೆ, ಸೇವೆ ಒದಗಿಸುವ ಸಂಸ್ಥೆಗಳು ಗ್ರಾಹಕರಿಗೆ ಪರಿಹಾರ ನೀಡಬೇಕೆನ್ನುವ ಭಾರತೀಯ ದೂರನಿಯಂತ್ರಣ ಮಂಡಲಿ (ಟಿ ಆರ್ ಎ ಐ)
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಮಾತಿನ ಮಧ್ಯದಲ್ಲಿ ದೂರವಾಣಿ ಕರೆ ಕಡಿತಗೊಂಡರೆ, ಸೇವೆ ಒದಗಿಸುವ ಸಂಸ್ಥೆಗಳು ಗ್ರಾಹಕರಿಗೆ ಪರಿಹಾರ ನೀಡಬೇಕೆನ್ನುವ ಭಾರತೀಯ ದೂರನಿಯಂತ್ರಣ ಮಂಡಲಿ (ಟಿ ಆರ್ ಎ ಐ) ನೀಡಿದ್ದ ಆದೇಶವನ್ನು ದೆಹಲಿ ಹೈಕೋರ್ಟ್ ಎತ್ತಿ ಹಿಡಿದಿದೆ.

ದಿನದ ಮೊದಲ ಮೂರು ಕರೆಗಳ ಕಡಿತಕ್ಕೆ ಟೆಲಿಕಾಮ್ ಸೇವಾ ಸಂಸ್ಥೆಗಳು ಗ್ರಾಹಕರಿಗೆ ಪರಿಹಾರ ನೀಡಬೇಕೆಂದು ಮುಖ್ಯ ನ್ಯಾಯಾಧೀಶೆ ಜಿ ರೋಹಿಣಿ ಮತ್ತು ನ್ಯಾಯಾಧೀಶ ಜಯಂತ್ ನಾಥ್ ಅವರುಗಳನ್ನು ಒಳಗೊಂಡ ವಿಭಾಗೀಯ ಪೀಠ ಆದೇಶಿಸಿದೆ.

ಪ್ರತಿ ಕರೆಯ ಕಡಿತಕ್ಕೆ ಜನವರಿ ೧ ೨೦೧೬ ರಿಂದ ಒಂದು ರೂ ಪರಿಹಾರ ನೀಡುವಂತೆ (ದಿನಕ್ಕೆ ಮೊದಲ ಮೂರು ಕರೆಗಳಿಗೆ) ಅಕ್ಟೋಬರ್ ೧೬ ೨೦೧೫ ರಂದು, ಟಿ ಆರ್ ಎ ಐ ಆದೇಶಿಸಿದ್ದ ಪರಿಹಾರ ನೀತಿಯನ್ನು ತಡೆ ಹಿಡಿಯುವಂತೆ ಟೆಲಿಕಾಮ್ ಸೇವಾ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

೨೦೧೫ ರ ಮೊದಲ ಭಾಗದಲ್ಲಿ ಗ್ರಾಹಕರು ಮಾಡಿದ್ದ ೨೫,೭೮೭ ಕರೆಗಳಲ್ಲಿ, ೨೦೦ ಕೋಟಿ ಕರೆಗಳು ಕಡಿತಗೊಂಡಿದ್ದು ದಾಖಲೆಯಾಗಿರುವ ಸನ್ನಿವೇಶದಲ್ಲಿ ಈ ಆದೇಶ ಮಾಡಲಾಗಿತ್ತು ಎಂದು ಟಿ ಆರ್ ಎ ಐ ವಾದ ಮಾಡಿತ್ತು.

ಕಡಿತಗೊಂಡ ಕರೆಗಳ ಪ್ರಮಾದ ೦.೭೭% ಇದ್ದು ಈ ಸಂದರ್ಭದಲ್ಲಿ ಟೆಲಿಕಾಮ್ ಸೇವಾ ಸಂಸ್ಥೆಗಳು ೩೬,೭೮೧ ಕೋಟಿ ರೂ ಆದಾಯ ಗಳಿಸಿವೆ ಎಂದು ಕೂಡ ಟಿ ಆರ್ ಎ ಐ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com