ಪ್ರಧಾನ ಸುದ್ದಿ
ಬಜೆಟ್ ನ ಮುದ್ರಿತ ಪ್ರತಿಗಳಿಲ್ಲ; ಹಸಿರು ಮಾರ್ಗ ತುಳಿದ ಸರ್ಕಾರ
ಸಂಪ್ರದಾಯವನ್ನು ಮುರಿದಿರುವ ಕೇಂದ್ರ ಸರ್ಕಾರ ೨೦೧೬-೧೭ ನೆ ಸಾಲಿನ ಸಾಮಾನ್ಯ ಬಜೆಟ್ ನ ಯಾವುದೇ ಮುದ್ರಿತ ಪ್ರತಿಗಳನ್ನು ನೀಡದೆ ಹಸಿರು ಮಾರ್ಗದತ್ತ ಮುಖ
ನವದೆಹಲಿ: ಸಂಪ್ರದಾಯವನ್ನು ಮುರಿದಿರುವ ಕೇಂದ್ರ ಸರ್ಕಾರ ೨೦೧೬-೧೭ ನೆ ಸಾಲಿನ ಸಾಮಾನ್ಯ ಬಜೆಟ್ ನ ಯಾವುದೇ ಮುದ್ರಿತ ಪ್ರತಿಗಳನ್ನು ನೀಡದೆ ಹಸಿರು ಮಾರ್ಗದತ್ತ ಮುಖ ಮಾಡಿದೆ.
ಸಾಮಾನ್ಯವಾಗಿ ಪ್ರತಿ ವರ್ಷ ಬಜೆಟ್ ಮಂಡನೆಯಾದ ಮೇಲೆ ಪತ್ರಕರ್ತರಿಗೆ ಸಾಮಾನ್ಯ ಬಜೆಟ್ ನ ಮುದ್ರಿತ ಪ್ರತಿಯನ್ನು ಕೊಡುವ ಪರಿಪಾಠವಿತ್ತು.
ಆದರೆ ಈ ವರ್ಷ ಮರಗಳನ್ನು ಉಳಿಸಿ ಆಂದೋಲನಕ್ಕೆ ಪೂರಕವಾಗಿ ಸಂಪ್ರದಾಯವನ್ನು ಮುರಿದಿರುವ ಸರ್ಕಾರ ಪತ್ರಕರ್ತರಿಗೆ ಮುದ್ರಿತ ಪ್ರತಿಗಳನ್ನು ನೀಡಿಲ್ಲ.
ನೂರಾರು ಪುಟಗಳುಳ್ಳ ಬಜೆಟ್ ಪ್ರತಿಗಳು, ಸರ್ಕಾರದ ಯೋಜನೆಗಳು, ಖರ್ಚು ವೆಚ್ಚ, ವಿವಿಧ ಇಲಾಖೆಗಳಿಗೆ ನೀಡಲಾಗಿರುವ ಹಣದ ವಿವರ ಇತ್ಯಾದಿಗಳ ಸವಿವರವನ್ನು ಒಳಗೊಂಡಿರುತ್ತದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ