
ನವದೆಹಲಿ: ಶನಿವಾರ ಮುಂಜಾನೆ ಪಂಜಾಬಿನ ಭಾರತೀಯ ವಾಯುಪಡೆಯ ಮೇಲೆ ಭಯೋತ್ಪಾದನಾ ದಾಳಿ ನಡೆದಿರುವ ಹಿನ್ನಲೆಯಲ್ಲಿ ೨೦ ವರ್ಷದ ಶಾಂತಿಯ ನಂತರ ಪಂಜಾಬಿನಲ್ಲಿ ಹೆಚ್ಚುತ್ತಿರುವ ಭಯೋತ್ಪಾದಕ ಘಟನೆಗಳ ಬಗ್ಗೆ ಸರ್ಕಾರವನ್ನು ಕಾಂಗ್ರೆಸ್ ಪ್ರಶ್ನಿಸಿದೆ.
"ಕಳೆದ ಕೆಲವು ತಿಂಗಳುಗಳಿಂದ ಭಯೋತ್ಪಾದನಾ ಚಟುವಟಿಕೆಗಳಿಗೆ ಪಂಜಾಬ್ ಇದ್ದಕ್ಕಿದ್ದ ಹಾಗೆ ಗುರಿಯಾಗಿರುವುದು ಏಕೆ? ೨೦ ವರ್ಷಗಳಿಂದ ರಾಜ್ಯ ಶಾಂತವಾಗಿತ್ತು" ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಪ್ರಶ್ನಿಸಿದ್ದಾರೆ.
"ಇನ್ನುಮುಂದೆ ಇಂತಹ ಘಟನೆಗಳು ನಡೆಯದ ಹಾಗೆ ಭದ್ರತೆಯನ್ನು ಕಾಪಾಡುವ ಹೊಣೆ ಪ್ರಧಾನಿ ಹೊರಬೇಕು" ಎಂದು ಖಾಸಗಿ ವಾಹಿನಿಯೊಂದರಲ್ಲಿ ತಿಳಿಸಿದ್ದಾರೆ.
ಶನಿವಾರ ಬೆಳಗ್ಗೆ ಮೂರು ಘಂಟೆಯ ಜಾವದಲ್ಲಿ ಆರು ಜನ ಉಗ್ರರು ಸೇನಾ ಧಿರಿಸು ಧರಿಸಿ ಪಠಾನ್ ಕೋಟ್ ನ ಐ ಎ ಎಫ್ ಗೆ ದಾಳಿ ಮಾಡಿದ ಹಿನ್ನಲೆಯಲ್ಲಿ ಭೀಕರ ಗುಂಡಿನ ಕಾಳಗದಿಂದ ಬೆಳಗ್ಗೆ ೮ ರ ಹೊತ್ತಿಗೆ ನಾಲ್ಕು ಜನ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿತ್ತು. ಇನ್ನೂ ಗುಂಡಿನ ಕಾಳಗ ಜಾರಿಯಲ್ಲಿದೆ.
Advertisement