
ಇಸ್ಲಾಮಾಬಾದ್: ಪಂಜಾಬಿನ ಪಠಾನ್ ಕೋಟ್ ಪಟ್ಟಣದ ಭಾರತೀಯ ವಾಯುಪಡೆಯ ನೆಲೆಯ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಪಾಕಿಸ್ತಾನ ಶನಿವಾರ ಖಂಡಿಸಿದೆ.
ಇಸ್ಲಾಮಾಬಾದಿನಲ್ಲಿ ಹೇಳಿಕೆ ನೀಡಿರುವ ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಸರ್ಕಾರಕ್ಕೆ, ಭಾರತೀಯರಿಗೆ ಹಾಗೂ ಮೃತಪಟ್ಟವರ ಕುಟುಂಬಗಳಿಗೆ ಹೃದಯಪೂರ್ವಕ ವಿಷಾದ ವ್ಯಕ್ತಪಡಿಸಿದೆ. ಗಾಯಗೊಂಡವರು ಶೀಘ್ರ ಗುಣಮುಖಗೊಳ್ಳಲೆಂದು ಕೂಡ ಹಾರೈಸಿದೆ ಎಂದು ರೇಡಿಯೋ ಪಾಕಿಸ್ತಾನ ವರದಿ ಮಾಡಿದೆ.
ಎರಡು ದೇಶಗಳ ನಡುವೆ ನಡೆದ ಉನ್ನತ ಮಟ್ಟದ ಮಾತುಕತೆಗೆ ಬದ್ಧವಾಗಿದ್ದೇವೆ ಎಂದು ತಿಳಿಸಿರುವ ಪಾಕಿಸ್ತಾನ ದಕ್ಷಿಣ ಏಶಿಯಾ ಪ್ರದೇಶದಲ್ಲಿ ಭಯೋತ್ಪಾದನೆಯ ನಿರ್ಮೂಲನೆಗೆ ಭಾರತದ ಜೊತೆಗೆ ಕೈಜೋಡಿಸಲು ಯಾವಾಗಲೂ ಸಿದ್ಧ ಎಂದು ಹೇಳಿಕೆಯಲ್ಲಿ ಪಾಕಿಸ್ತಾನ ತಿಳಿಸಿದೆ.
Advertisement