೨೦೦೦ ಸಿಸಿ ಮೇಲ್ಪಟ್ಟ ಡೀಸೆಲ್ ವಾಹನಗಳಿಗೆ ನಿಷೇಧ; ಮನವಿ ಆಲಿಸಲಿರುವ ಸುಪ್ರೀಂ ಕೋರ್ಟ್

೨೦೦೦ ಸಿಸಿಗೂ ಹೆಚ್ಚು ಸಾಮರ್ಥ್ಯದ ಡೀಸೆಲ್ ವಾಹನಗಳ ನೊಂದಣಿ ಮತ್ತು ಮಾರಾಟವನ್ನು ನಿಷೇಧಿಸಿರುವ ಹಿಂದಿನ ತೀರ್ಪಿಗೆ ತಿದ್ದುಪಡಿ ತರುವಂತೆ ಕೋರಿ ವಾಹನ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ೨೦೦೦ ಸಿಸಿಗೂ ಹೆಚ್ಚು ಸಾಮರ್ಥ್ಯದ ಡೀಸೆಲ್ ವಾಹನಗಳ ನೊಂದಣಿ ಮತ್ತು ಮಾರಾಟವನ್ನು ನಿಷೇಧಿಸಿರುವ ಹಿಂದಿನ ತೀರ್ಪಿಗೆ ತಿದ್ದುಪಡಿ ತರುವಂತೆ ಕೋರಿ ವಾಹನ ಅಭಿವೃದ್ಧಿ ಸಂಸ್ಥೆಗಳು ಸುಪ್ರೀಮ್ ಕೋರ್ಟ್ ಮೊರೆ ಹೋಗಿದ್ದು, ಈ ಮನವಿಯನ್ನು ಮಂಗಳವಾರ ಆಲಿಸುವುದಾಗು ಕೋರ್ಟ್ ತಿಳಿಸಿದೆ.

೨೦೦೦ ಸಿಸಿಗೂ ಹೆಚ್ಚು ಸಾಮರ್ಥ್ಯದ ಡೀಸೆಲ್ ವಾಹನಗಳ ನೊಂದಣಿ ಮತ್ತು ಮಾರಾಟವನ್ನು ನಿಷೇಧಿಸಿ ಡಿಸೆಂಬರ್ ೧೬ ೨೦೧೫ ರಂದು ನೀಡಿದ್ದ ಆದೇಶಕ್ಕ ತಿದ್ದುಪಡಿ ತರುವಂತೆ ಮಹೀಂದ್ರ ಅಂಡ್ ಮಹೀಂದ್ರ, ಮರ್ಸಿಡಿಸ್, ಟೊಯೋಟಾ ಮನವಿ ಸಲ್ಲಿಸಿದ್ದು ಈ ಸಂಸ್ಥೆಗಳ ಪರವಾಗಿ ಅಭಿಷೇಕ್ ಮನು ಸಿಂಗ್ವಿ, ಕಪಿಲ್ ಸಿಬಲ್ ಮತ್ತು ಗೋಪಾಲ್ ಸುಬ್ರಮಣಿಯನ್ ವಾದ ಮಂಡಿಸುತ್ತಿದ್ದಾರೆ. ಮುಖ್ಯ ನ್ಯಾಯಾಧೀಶ ಟಿ ಎಸ್ ಠಾಕೂರ್ ಅವರನ್ನು ಒಳಗೊಂಡ ಅಪೆಕ್ಸ್ ವಿಭಾಗೀಯ ಪೀಠ ಮಂಗಳವಾರ ವಾದ ಆಲಿಸಲಿದೆ

ಚಳಿಗಾಲದಲ್ಲಿ ಹೆಚ್ಚುವ ವಾಯುಮಾಲಿನ್ಯವನ್ನು ಪರಿಗಣಿಸಿ ಕೋರ್ಟ್ ಈ ತೀರ್ಪು ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com