
ಆಗ್ರಾ: ಮೊಘಲ್ ವಸ್ತುಸಂಗ್ರಹಾಲಯ, ಆಗ್ರಾ ಪಾರಂಪರಿಕ ಕೇಂದ್ರ ಸೇರಿದಂತೆ ನಾಲ್ಕು ಕಟ್ಟಡಗಳಿಗೆ ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮಂಗಳವಾರ ಶಿಲಾನ್ಯಾಸ ನಡೆಸಿದ್ದಾರೆ.
ತಾಜ್ ಮಹಲ್ ನ ಹತ್ತಿರದಲ್ಲೇ ನಿರ್ಮಾಣವಾಗುತ್ತಿರುವ ಈ ಕಟ್ಟಡಗಳಿಗೆ ಶಿಲಾನ್ಯಾಸ ನೆರವೇರಿಸಿದ ಮುಖ್ಯಮಂತ್ರಿಯವರ ಜೊತೆಗೆ ಪ್ರವಾಸೋದ್ಯಮ ಸಚಿವ ಓಂ ಪ್ರಕಾಶ್ ಸಿಂಗ್ ಮತ್ತಿತರ ಹಿರಿಯ ಅಧಿಕಾರಿಗಳೂ ಭಾಗಿಯಾಗಿದ್ದರು.
ಅಧಿಕಾರಿಗಳ ಪ್ರಕಾರ ಮೊಘಲ್ ವಸ್ತುಸಂಗ್ರಹಾಲಯವನ್ನು ಆರು ಎಕರೆ ಜಾಗದಲ್ಲಿ ನಿರ್ಮಿಸಲಾಗುತ್ತಿದೆ. ಇದು ಪ್ರವಾಸಿಗರನ್ನು ಸೆಳೆಯಲು ಕಟ್ಟಲಾಗುತ್ತಿದ್ದು, ಮೊಘಲರ ಶಸ್ತ್ರಾಸ್ತ್ರಗಳು, ಬಟ್ಟೆ ಬರೆಗಳು ಇತರ ಸಾಂಸ್ಕೃತಿಕ ವಸ್ತುಗಳನ್ನು ಪ್ರದರ್ಶನಕ್ಕೆ ಇರಿಸಲಾಗುವುದು ಎಂದು ತಿಳಿದುಬಂದಿದೆ.
ಪ್ರವಾಸ, ಕಲೆ, ಸಂಸ್ಕೃತಿ ಮತ್ತು ಶಿಕ್ಷಣದ ಪ್ರಚಾರಕ್ಕೆ ೧೧೦೦೦ ಚದುರ ಮೀಟರ್ ಪ್ರದೇಶದಲ್ಲಿ ಆಗ್ರಾ ಪಾರಂಪರಿಕ ಕೇಂದ್ರವನ್ನು ಕೂಡ ನಿರ್ಮಿಸಲಾಗುತ್ತಿದೆ.
Advertisement