ಮೂರು ಎಚ್ ಎಂ ಟಿ ಸಂಸ್ಥೆಗಳಿಗೆ ಬೀಗ ಜಡಿಯಲು ಸಂಪುಟ ಅಸ್ತು

ಹಿಂದೂಸ್ತಾನ್ ಮೆಷಿನ್ ಟೂಲ್ಸ್ ಒಡೆತನದ ಎಚ್ ಎಂ ಟಿ ವಾಚಸ್, ಎಚ್ ಎಂ ಟಿ ಚಿನಾರ್ ವಾಚಸ್ ಮತ್ತು ಎಚ್ ಎಂ ಟಿ ಬಿಯರಿಂಗ್ಸ್ ಸಂಸ್ಥೆಗಳನ್ನು ಸಂಪೂರ್ಣವಾಗಿ ಮುಚ್ಚಲು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಹಿಂದೂಸ್ತಾನ್ ಮೆಷಿನ್ ಟೂಲ್ಸ್ ಒಡೆತನದ ಎಚ್ ಎಂ ಟಿ ವಾಚಸ್, ಎಚ್ ಎಂ ಟಿ ಚಿನಾರ್ ವಾಚಸ್ ಮತ್ತು ಎಚ್ ಎಂ ಟಿ ಬಿಯರಿಂಗ್ಸ್ ಸಂಸ್ಥೆಗಳನ್ನು ಸಂಪೂರ್ಣವಾಗಿ ಮುಚ್ಚಲು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಬುಧವಾರ ಅಂಗೀಕಾರ ನೀಡಿದೆ.

"೪೨೭.೪೮ ಕೋಟಿ ಧನಸಹಾಯದೊಂದಿಗೆ, ಸುಮಾರು ಸಾವಿರ ನೌಕರರು ವಿ ಆರ್ ಎಸ್/ ವಿ ಎಸ್ ಎಸ್ ಯೋಜನೆಗಳ ಪ್ರಕಾರ ನಿವೃತ್ತಿ ಹೊಂದಿ ಸಂಸ್ಥೆಗಳಿಂದ ಬೇರ್ಪಟ್ಟ ಮೇಲೆ ಈ ನಷ್ಟ ಅನುಭವಿಸುತ್ತಿರುವ ಎಚ್ ಎಂ ಟಿ ಲಿಮಿಟೆಡ್ ನ ಅಂಗ ಸಂಸ್ಥೆಗಳಾದ ಎಚ್ ಎಂ ಟಿ ಗಡಿಯಾರಗಳು, ಎಚ್ ಎಂ ಟಿ ಚಿನಾರ್ ಗಡಿಯಾರಗಳು ಮತ್ತು ಎಚ್ ಎಂ ಟಿ ಬಿಯರಿಂಗ್ಸ್ ಸಂಸ್ಥೆಗಳು ಅಧಿಕೃತವಾಗಿ ಮುಚ್ಚಲಿವೆ" ಎಂದು ಸಿಸಿಇಎ ಹೇಳಿಕೆಯಲ್ಲಿ ತಿಳಿಸಿದೆ.

೨೦೦೭ ವೇತನ ಶ್ರೇಣಿಯ ಪ್ರಕಾರ ಎಲ್ಲಾ ನೌಕರರು ವಿ ಆರ್ ಎಸ್ ಯೋಜನೆಯ ಲಾಭ ಪಡೆಯಲಿದ್ದಾರೆ ಎಂದು ಕೂಡ ತಿಳಿಸಲಾಗಿದೆ.

ಈ ಮೂರೂ ಸಂಸ್ಥೆಗಳ ಸ್ಥಿರ ಮತ್ತು ಚರಾಸ್ತಿಗಳನ್ನು ಸರ್ಕಾರದ ನೀತಿಯ ಮೇರೆಗೆ ಮಾರಾಟ ಮಾಡಲಾಗುವುದು ಎಂದು ಕೂಡ ಹೇಳಿಕೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com