ದೇಹಕ್ಕೆ 6 ಗುಂಡು ಹೊಕ್ಕರೂ, ಧೈರ್ಯದಿಂದ ಹೋರಾಡಿದ ಯೋಧ ಸೈಲೇಶ್

ಸೈಲೇಶ್ ಉಗ್ರರನ್ನು ಸದೆಬಡಿಯುತ್ತಾ ಮುನ್ನುಗ್ಗಿದ್ದರು. ಆ ವೇಳೆ ಸೈಲೇಶ್ ಕಿಬ್ಬೊಟ್ಟೆಗೆ 6 ಗುಂಡುಗಳು ತಾಗಿದವು. ಮುಂದಿನ ಅರ್ಧ ಗಂಟೆಯಲ್ಲಿ ಕಾಮಾಂಡೋಗಳು...
ಸೈಲೇಶ್ ಗೌರ್
ಸೈಲೇಶ್ ಗೌರ್
ಪಠಾಣ್ ಕೋಟ್ : ಜನವರಿ 2 ರಂದು ಪಾಕ್ ಉಗ್ರರು ಪಠಾಣ್ಕೋಟ್ ವಾಯನೆಲೆ ಮೇಲೆ ದಾಳಿ ಮಾಡಿದಾಗ ಗುರುಸೇವಕ್ ಸಿಂಗ್ ಮತ್ತು ಸೈಲೇಶ್ ಗೌರ್ ಎಂಬ ಈ ಯೋಧರು ಉಗ್ರರೊಂದಿಗೆ ಹೋರಾಡಿದ ರೀತಿಯೇ ಅಂಥದ್ದು. ಉಗ್ರರೊಂದಿಗೆ ಕಾದಾಟಕ್ಕಿಳಿದು ತಮ್ಮ ಕೊನೆ ಉಸಿರಿನವರೆಗೂ ಮಾತೃಭೂಮಿಯ ರಕ್ಷಣೆಗಾಗಿ ಹೋರಾಡಿ ಗುರುಸೇವಕ್ ಸಿಂಗ್ ಹುತಾತ್ಮರಾದರು. ಇತ್ತ ಸೈಲೇಶ್ ದೇಹಕ್ಕೆ 6 ಗುಂಡುಗಳು ತಾಗಿದ್ದವು. ಶೈಲೇಶ್ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.
ಆ ಉಗ್ರರ ದಾಳಿ ನಡೆದಾಗ ಯೋಧರು ಯಾವ ರೀತಿ ಹೋರಾಟ ನಡೆಸಿದ್ದರು ಎಂಬುದನ್ನು ಭಾರತೀಯ ವಾಯುಸೇನೆಯ ಅಧಿಕಾರಿಯೊಬ್ಬರು ಸುದ್ದಿ ಮಾಧ್ಯಮವೊಂದರಲ್ಲಿ ಹೇಳಿದ್ದಾರೆ. ಆ ಹೋರಾಟ ಹೇಗಿತ್ತು ಎಂಬುದನ್ನು ಅವರ ಮಾತಿನಲ್ಲೇ ಕೇಳಿ...
ಜನವರಿ 2ರಂದು ಪಠಾಣ್ಕೋಟ್ ವಾಯುನೆಲೆ ಮೇಲೆ ಉಗ್ರರು ಗುರಿಯಿಟ್ಟಿದ್ದಾರೆ ಎಂಬ ಮಾಹಿತಿ ಸಿಕ್ಕಿತು. ಕೆಲವೇ ಕ್ಷಣಗಳಲ್ಲಿ ನಾಲ್ವರು ಆಗಂತುಕರನ್ನು ವಾಯುನೆಲೆ ಬಳಿ ನೋಡಿದೆವು. 45 ನಿಮಿಷ ಕಳೆದಾಗ ಆ ಆಗಂತುಕರು ಇನ್ನೂ ಸ್ವಲ್ಪ ಮುಂದೆ ಬಂದಿರುವುದು ಕಾಣಿಸಿತು. ವಾಯುನೆಲೆಯಲ್ಲಿ ಮೆಕ್ಯಾನಿಕಲ್ ಟ್ರಾನ್ಸ್ಪೋರ್ಟ್ ನೆಲೆಗೆ ಅವರು ಹೋಗುತ್ತಿದ್ದಾರೆ ಎಂಬುದು ತಿಳಿಯಿತು. ಯಾರಿಗೂ ಸಂಶಯ ಬರದಂತೆ ಮೆಲ್ಲನೆ ಅವರು ಹೆಜ್ಜೆ ಹಾಕುತ್ತಿದ್ದರು.
ಮುಂಜಾನೆ 3 ಗಂಟೆಯ ಹೊತ್ತಲ್ಲಿ 12 ಯೋಧರಿರುವ ಗರುಡ್ ಕಮಾಂಡೋ ತಂಡವನ್ನು ವಾಯನೆಲೆಯಲ್ಲಿ ನಿಯೋಜಿಸಲಾಯಿತು. ಉಗ್ರರ ಗಮ್ಯಸ್ಥಾನವಾದ ಮೆಕ್ಯಾನಿಕಲ್ ಟ್ರಾನ್ಸ್ಪೋರ್ಟ್ ನೆಲೆಯ ಹೊರಗೆ ಇಬ್ಬಿಬ್ಬರ ಮೂರು ತಂಡಗಳನ್ನಿ ನಿಯೋಜಿಸಲಾಯಿತು. ಇನ್ನು ಮೂರು ಗುಂಪುಗಳು ಉಗ್ರರ ವಿರುದ್ಧ ಆಕ್ರಮಣ ನಡೆಸುವಂತೆ ಆದೇಶ ನೀಡಲಾಯಿತು.
ಮೊದಲ ತಂಡದಲ್ಲಿದ್ದ ಗುರುಸೇವಕ್ ಸಿಂಗ್ ಉಗ್ರರ ಜತೆ ಧೈರ್ಯದಿಂದ ಸೆಣಸಾಡಿದ. ಎರಡೂ ಕಡೆಯಿಂದ ಗುಂಡಿನ ಚಕಮಕಿ ಮುಂದುವರಿಯಿತು. ಮೂರು ಬುಲೆಟ್ಗಳು ಗುರುಸೇವಕ್ ದೇಹಕ್ಕೆ ತಾಗಿತು. ಹೀಗಿದ್ದರೂ ಗುರುಸೇವಕ್ ಉಗ್ರರತ್ತ ಮುನ್ನುಗ್ಗಿದ. ಆಮೇಲೆ ಅಲ್ಲೇ ಕುಸಿದು ಬಿದ್ದರು. ಇದರೊಂದಿಗೆ ಸೈಲೇಶ್ ಉಗ್ರರನ್ನು ಸದೆಬಡಿಯುತ್ತಾ ಮುನ್ನುಗ್ಗಿದ್ದರು. ಆ ವೇಳೆ ಸೈಲೇಶ್ ಕಿಬ್ಬೊಟ್ಟೆಗೆ 6 ಗುಂಡುಗಳು ತಾಗಿದವು. ಮುಂದಿನ ಅರ್ಧ ಗಂಟೆಯಲ್ಲಿ ಕಾಮಾಂಡೋಗಳು ಉಗ್ರರನ್ನು ಹತ್ಯೆಗೈಯ್ಯುವಲ್ಲಿ ಸಫಲರಾದರು.
ಇತ್ತ ಸೈಲೇಶ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಮೂರು ಗಂಟೆಗಳ ನಂತರ ಸೈಲೇಶ್ನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅಂಬಾಲ ಮೂಲದ 24 ರ ಹರೆಯದ ಸೈಲೇಶ್ನ ಸ್ಥಿತಿ ಚಿಂತಾಜನಕವಾಗಿದೆ. 
ತಾಯ್ನಾಡಿಗಾಗಿ ಧೀರತೆಯಿಂದ ಹೋರಾಡಿದ ಶೈಲೇಶ್, ಬೇಗನೆ ಗುಣಮುಖವಾಗಲಿ...ರಾಷ್ಟ್ರದ ಪ್ರಾರ್ಥನೆ ಸೈಲೇಶ್‌ಗಿರಲಿ...

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com