ಮೋದಿ ದೂರದೃಷ್ಟಿಯುಳ್ಳ ನಾಯಕ, ಅವರು ಹೇಳುವ ವಿಚಾರಗಳು ಸರಿ ಇವೆ: ವಿಜ್ಞಾನಿ ಪ್ರೊ.ಸಿಎನ್ಆರ್ ರಾವ್

ರಾಜಕಾರಣಿಗಳನ್ನು ಈಡಿಯೆಟ್ಸ್ ಎಂದಿದ್ದ ಭಾರತ ರತ್ನ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಸಿಎನ್ ಆರ್ ರಾವ್, ಈಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೂರದೃಷ್ಟಿಯುಳ್ಳ ನಾಯಕ ಎಂದು ಬಣ್ಣಿಸಿದ್ದಾರೆ.
ನರೇಂದ್ರ ಮೋದಿ- ಸಿಎನ್ ಆರ್ ರಾವ್
ನರೇಂದ್ರ ಮೋದಿ- ಸಿಎನ್ ಆರ್ ರಾವ್

ಬೆಂಗಳೂರು: ವೈಜ್ಞಾನಿಕ ಸಂಶೋಧನೆಗಳಿಗೆ ಸರ್ಕಾರ ಕಡಿಮೆ ಸಂಪನ್ಮೂಲಗಳನ್ನು ಮೀಸಲಿಡುತ್ತಿದೆ ಎಂಬ ಕಾರಣಕ್ಕೆ ರಾಜಕಾರಣಿಗಳನ್ನು ಈಡಿಯೆಟ್ಸ್ ಎಂದಿದ್ದ ಭಾರತ ರತ್ನ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಸಿಎನ್ ಆರ್ ರಾವ್, ಈಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೂರದೃಷ್ಟಿಯುಳ್ಳ ನಾಯಕ ಎಂದು ಬಣ್ಣಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ಕನಸುಗಳನ್ನು ನನಸಾಗಿಸಲು ಸೂಕ್ತ ವೈಜ್ಞಾನಿಕ ಸಲಹೆ ಅಗತ್ಯವಿದೆ ಎಂದಿದ್ದು, ಮಿಷನ್ ಮೋಡ್ ಯೋಜನೆಗಳನ್ನು ಪ್ರಾರಂಭಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರೊ.ಸಿಎನ್ಆರ್ ರಾವ್,  ಪ್ರಧಾನಿ ಮೋದಿ ಅವರ ನೀತಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರು ದೂರದೃಷ್ಟಿಯುಳ್ಳ ನಾಯಕ, ಒಳಿತನ್ನು ಮಾಡಲು ಬಯಸುತ್ತಿರುವ ನಾಯಕ ಎಂಬುದರಲ್ಲಿ ಸಂಶಯವಿಲ್ಲ, ಅವರು ಹೇಳುವ ವಿಷಯಗಳಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಅವರು ಉತ್ತಮ ಸಲಹೆಗಳನ್ನು ಸ್ವೀಕರಿಸುತ್ತಾರೆ. ವಿಜ್ಞಾನ ಅಥವಾ ಸಮಾಜಕ್ಕೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳನ್ನು ಒಬ್ಬ ವ್ಯಕ್ತಿಯಾಗಲಿ  ಅಥವಾ ಒಂದೇ ಇಲಾಖೆಯಾಗಲಿ ನಿರ್ವಹಿಸುವುದು ಕಷ್ಟ ಸಾಧ್ಯ. ವಿಜ್ಞಾನವನ್ನು ಬಳಸಿಕೊಂಡು ಒಂದೆಡೆ ವಿಶ್ವದ ಅನೇಕ ದೇಶಗಳಿಗೆ ಪೈಪೋಟಿ ನೀಡಬೇಕಾದರೆ ಮತ್ತೊಂದೆಡೆ ಬಡತನದಂತಹ ಸಮಸ್ಯೆಗಳನ್ನು ನಿರ್ಮೂಲನೆ ಮಾಡಲು ಯತ್ನಿಸಬೇಕು, ಅದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಸೂಕ್ತ ಸಲಹೆಯ ಅಗತ್ಯವಿದೆ ಎಂದು ಸಿಎನ್ ಆರ್ ರಾವ್ ಹೇಳಿದ್ದಾರೆ.    
ಪ್ರಧಾನಿ ಮೋದಿ ಅವರು ಸೂಕ್ತ ಸಲಹೆ ಪಡೆದು ಉತ್ತಮ ಫಲಿತಾಂಶ ನೀಡುವ ಕೆಲಸಗಳನ್ನು  ಮಾಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಸಿಎನ್ ಆರ್ ರಾವ್ ಅಭಿಪ್ರಾಯಪಟ್ಟಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com