ಎಐಡಿಎಂಕೆ ಸಭಾ ಪ್ರದೇಶದಿಂದ ನಾಲ್ಕು ಬಾಂಬ್ ಗಳ ವಶ

ತಮಿಳುನಾಡಿನ ಆಡಳಿತ ಪಕ್ಷ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಆಯೋಜಿಸಿದ್ದ ಸಭೆಯ ಪ್ರದೇಶದಲ್ಲಿ ಎರಡು ನಾಡ ಬಾಂಬ್ ಗಳು ಮತ್ತೆರಡು ಪೆಟ್ರೋಲ್
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಧುರೈ: ತಮಿಳುನಾಡಿನ ಆಡಳಿತ ಪಕ್ಷ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಆಯೋಜಿಸಿದ್ದ ಸಭೆಯ ಪ್ರದೇಶದಲ್ಲಿ ಎರಡು ನಾಡ ಬಾಂಬ್ ಗಳು ಮತ್ತೆರಡು ಪೆಟ್ರೋಲ್ ಬಾಂಬ್ ಗಳನ್ನು ಪತ್ತೆ ಹಚ್ಚಿ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಜೈಹಿಂದ್ ಪುರಂ ನಲ್ಲಿ ನೆನ್ನೆ ರಾತ್ರಿ ಸಭೆ ಪ್ರಾರಂಭಕ್ಕೆ ಮುಂಚಿತವಾಗಿಯೇ ಎರಡು ಬಾಂಬ್ ಗಳನ್ನು ಪತ್ತೆ ಮಾಡಲಾಗಿದ್ದರೆ ಕಾರ್ಯಕ್ರಮದ ನಂತರ ಇನ್ನೆರಡು ಬಾಂಬ್ ಗಳನ್ನು ಪತ್ತೆ ಹಚ್ಚಲಾಗಿದೆ.  ಆದರೆ ಯಾವುದೂ ಸ್ಫೋಟಗೊಂಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಭಾನುವಾರವಷ್ಟೇ ಎಐಡಿಎಂಕೆ ಮತ್ತು ತಮಿಳು ನಾಡು ಸಚಿವ ಸೆಲ್ಲುರು ಕೆ ರಾಜು ಅವರ ಕಛೇರಿಗಳ ಮೇಕೆ ಎರಡು ಪ್ರತ್ಯೇಕ ಘಟನೆಗಳಲ್ಲಿ ನಾಡ ಬಾಂಬ್ ಗಳನ್ನು ಎಸೆಯಲಾಗಿತ್ತು. ಈ ಘಟನೆಗಳಲ್ಲಿ ಯಾರೂ ಗಾಯಗೊಂಡಿರಲಿಲ್ಲ.

ಮಧುರೈ ಪಶ್ಚಿಮ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ನೆನ್ನೆಯ ಸಭೆಯನ್ನು ಕೂಡ ಆಯೋಜಿಸಿದ್ದ ರಾಜು ಅವರು ಈ ಕೃತ್ಯಗಳಿಗೆ ರಾಜಕೀಯ ವಿರೋಧಿಗಳ ಮೇಲೆ ಆರೋಪ ಹೊರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com