26 ವರ್ಷಗಳ ನಂತರ ರಿಪಬ್ಲಿಕ್ ಡೇ ಪರೇಡ್ ಗೆ ಶ್ವಾನದಳ ಎಂಟ್ರಿ

ಈ ಬಾರಿ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸ ಪರೇಡ್‌ನ‌ಲ್ಲಿ ಭಾರತೀಯ ಸೇನೆಯ ಆಯ್ದ 36 ಶ್ವಾನಗಳು ಹೆಜ್ಜೆ ಹಾಕಲಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಈ ಬಾರಿ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸ ಪರೇಡ್‌ನ‌ಲ್ಲಿ ಭಾರತೀಯ ಸೇನೆಯ ಆಯ್ದ 36 ಶ್ವಾನಗಳು ಹೆಜ್ಜೆ ಹಾಕಲಿವೆ.
26 ವರ್ಷಗಳ ನಂತರ, ಉಗ್ರ ನಿಗ್ರಹ ಕಾರ್ಯಾಚರಣೆ ಮತ್ತು ಬಂಡುಕೋರ ನಿಗ್ರಹ ಕಾರ್ಯಾಚರಣೆಗಳಲ್ಲಿ ಅಸಂಖ್ಯ ಸೈನಿಕರ ಜೀವವನ್ನು ಉಳಿಸಿರುವ ಶ್ರೇಷ್ಠ ದರ್ಜೆಯ ಮತ್ತು ಅತ್ಯುತ್ತಮ ತರಬೇತಿ ಪಡೆದಿರುವ ನಾಯಿಗಳು ಜನವರಿ 26ರಂದು ರಾಜಪಥದಲ್ಲಿ ನಡೆಯುವ ಪೆರೇಡ್‌ನ‌ಲ್ಲಿ ತಮ್ಮ ನಿರ್ವಾಹಕರ ಜತೆಗೆ ಹೆಜ್ಜೆ ಹಾಕಲಿವೆ.
ಭಾರತೀಯ ಸೇನೆಯಲ್ಲಿ ಸುಮಾರು 1,2000 ಲ್ಯಾಬ್ರಡೋರ್‌ಗಳು ಮತ್ತು ಜರ್ಮನ್‌ ಶೆಫ‌ರ್ಡ್‌ಗಳು ಇವೆ. ಇವುಗಳಲ್ಲಿ 36 ಶ್ವಾನಗಳನ್ನು ರಾಜಪಥದ ಪೆರೇಡ್‌ನ‌ಲ್ಲಿ ಪ್ರದರ್ಶಿಸಲಾಗುತ್ತಿದೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ಗಡಿ ನಿಯಂತ್ರಣ ರೇಖೆಯ ಉದ್ದದಲ್ಲಿರುವ ತಾಂಗಧಾರ್‌ ವಲಯದ ಎತ್ತರದ ಪ್ರದೇಶದಲ್ಲಿ ಭಾರೀ ಶಸ್ತ್ರಸಜ್ಜಿತ ನುಸುಳುಕೋರ ಉಗ್ರರೊಂದಿಗೆ ಭಾರತೀಯ ಸೇನಾ ಪಡೆ ಕಾಳಗ ನಿರತವಾಗಿದ್ದ ಸಂದರ್ಭದಲ್ಲಿ ಟೆರಿಟೋರಿಯಲ್‌ ಆರ್ಮಿಯ ನಾಲ್ಕು ವರ್ಷ ಪ್ರಾಯದ ಹೆಣ್ಣು ಲ್ಯಾಬ್ರಡೋರ್‌ ಮಾನಸಿ ಮತ್ತು ಅದರ ನಿರ್ವಾಹಕರಾದ ಬಶೀರ್‌ ಅಹ್ಮದ್‌ ವಾರ್‌ ಮಾಡಿರುವ ಪರಮೋಚ್ಚ ತ್ಯಾಗವು ಅವಿಸ್ಮರಣೀಯವಾಗಿದೆ.
ಭಾರತದ ಮೀರತ್‌ನಲ್ಲಿ 1960ರಲ್ಲೇ ಸೇನಾ ನಾಯಿಗಳ ತರಬೇತಿ ಶಾಲೆಯನ್ನು ಆರಂಭಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com