ಇಂದು ದೆಹಲಿಯ ವಿಜ್ಞಾನ ಭವನದಲ್ಲಿ ಉದ್ಯಮಶೀಲತೆಗೆ ಪ್ರೋತ್ಸಾಹ ನೀಡುವ "ಸ್ಟಾರ್ಟ್ ಅಪ್ ಇಂಡಿಯಾ' ಅಭಿಯಾನಕ್ಕೆ ಚಾಲನೆ ನೀಡಿ ಮಾತಮಾಡಿದ ಮೋದಿ, 'ಸ್ಟಾರ್ಟ್ ಅಪ್ ಇಂಡಿಯಾ' ಯುವಕರಿಗೆ ಹೊಸ ಹಾದಿ ತೋರಿಸಲಿದೆ. ಯುವ ಜನಾಂಗದಲ್ಲಿ ಉದ್ಯಮ ಶೀಲತೆಯ ಹೊಸ ಆಲೋಚನೆಗಳು ಇರುತ್ತವೆ. ಆದರೆ ಕೆಲವರು ಅಂತಹ ಕನಸನ್ನು ಅರ್ಧದಲ್ಲೇ ಕೈಬಿಡುತ್ತಾರೆ; ಕೆಲವೇ ಕೆಲವರು ಮಾತ್ರವೇ ತಮ್ಮ ಆಲೋಚನೆಗಳನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸುವ ಸಂಕಲ್ಪ ಹೊಂದಿ ಯಶಸ್ವಿಯಾಗುತ್ತಾರೆ ಮತು ಕನಸನ್ನು ನನಸುಗೊಳಿಸುತ್ತಾರೆ' ಎಂದರು.