ನೆಲ ಗುಡಿಸುತ್ತಿರುವ ಮೋದಿಯವರ ಹಳೇ ಫೋಟೋ 'ನಕಲಿ'

ನರೇಂದ್ರ ಮೋದಿ ಪೊರಕೆ ಹಿಡಿದು ನೆಲ ಗುಡಿಸುತ್ತಿರುವ ಫೋಟೋ ಕಳೆದ ಲೋಕಸಭಾ ಚುನಾವಣೆಯ ವೇಳೆ ಅತೀ ಹೆಚ್ಚು ಚರ್ಚೆಗೆ ಗ್ರಾಸವಾದ ಫೋಟೋ...
ಪೊರಕೆ ಹಿಡಿದು ನೆಲ ಗುಡಿಸುತ್ತಿರುವ ಫೋಟೋ (ಅಸಲಿ ಮತ್ತು ಫೋಟೋಶಾಪ್ ಮಾಡಿದ್ದು)
ಪೊರಕೆ ಹಿಡಿದು ನೆಲ ಗುಡಿಸುತ್ತಿರುವ ಫೋಟೋ (ಅಸಲಿ ಮತ್ತು ಫೋಟೋಶಾಪ್ ಮಾಡಿದ್ದು)
ನವದೆಹಲಿ: ನರೇಂದ್ರ ಮೋದಿ ಪೊರಕೆ ಹಿಡಿದು ನೆಲ ಗುಡಿಸುತ್ತಿರುವ ಫೋಟೋ ಕಳೆದ ಲೋಕಸಭಾ ಚುನಾವಣೆಯ ವೇಳೆ ಅತೀ ಹೆಚ್ಚು  ಚರ್ಚೆಗೆ ಗ್ರಾಸವಾದ ಫೋಟೋ ಆಗಿತ್ತು.   ಚುನಾವಣಾ ಪ್ರಚಾರದ ಭಾಗವಾಗಿ ಈ ಚಿತ್ರವನ್ನು ಬಿಜೆಪಿ ಸೋಷ್ಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿತ್ತು. ಆದರೆ ಆ ಚಿತ್ರ ಎಲ್ಲಿಂದ ಬಂತು? ಅದನ್ನು ಸೋಷ್ಯಲ್ ಮೀಡಿಯಾದಲ್ಲಿ ಹರಿಯ ಬಿಟ್ಟಿದ್ದು ಯಾರು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿಗಳಿಲ್ಲ.
1988ರಲ್ಲಿ ಆರೆಸ್ಸೆಸ್ ಕಾರ್ಯಕರ್ತನಾಗಿದ್ದಾಗ ತೆಗೆದ ಮೋದಿಯವರ ಅಪರೂಪ ಫೋಟೋ ಇದು ಎಂಬ ಅಡಿಟಿಪ್ಪಣಿಯೊಂದಿಗೆ ಈ ಫೋಟೋ ಸಂಚಲನ ಸೃಷ್ಟಿಸಿತ್ತು. ಇದು ನಕಲಿ ಚಿತ್ರ ಎಂದು ಸಾಕಷ್ಟು ಜನರು ವಾದಿಸಿದ್ದರು. ಈ ಫೋಟೋದಲ್ಲಿರುವುದು ಮೋದಿಯಲ್ಲ, ಇದು ಫೋಟೋಶಾಪ್ ಮಾಡಿದ ಚಿತ್ರ ಎಂದು ಸೋಷ್ಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಚರ್ಚೆಗಳು ನಡೆದಿದ್ದವು. 
ಈ ನಡುವೆ ಮೋದಿ ಬಹುಮತದಿಂದ ಗೆದ್ದು ಅಧಿಕಾರಕ್ಕೆ ಏರಿದ್ದೂ ಆಯ್ತು. ಇದಾದನಂತರವೂ ವಾಟ್ಸಾಪ್ ಮತ್ತು ಫೇಸ್‌ಬುಕ್ ನಲ್ಲಿ ಈ ಫೋಟೋ ಹರಿದಾಡುತ್ತಲೇ ಇದೆ. ಮೋದಿ ಅಧಿಕಾರಕ್ಕೇರಿ ವರ್ಷ ಕಳೆದ ನಂತರ ಇದೀಗ ಈ ಫೋಟೋ ನಕಲಿ ಎಂಬುದು ಸಾಬೀತಾಗಿದೆ.
ಮೋದಿ ನೆಲ ಗುಡಿಸುತ್ತಿರುವ ಈ ಫೋಟೋ ಮೂಲಕ ಮೋದಿ ಒಬ್ಬ ಸಾಮಾನ್ಯ ವ್ಯಕ್ತಿ ಎಂದು ಸಾರಲು ಬಿಜೆಪಿಗೆ ಸಾಧ್ಯವಾಗಿತ್ತು. ಆದರೆ ಅಹಮ್ಮದಾಬಾದ್ ಮೂಲದ ಕಾರ್ಯಕರ್ತನೊಬ್ಬ ಈ ಬಗ್ಗೆ ಆರ್‌ಟಿಐ ಸಲ್ಲಿಸಿ ಸತ್ಯ ಕಂಡುಕೊಂಡಿದ್ದಾನೆ.
ಕಾರ್ಯಕರ್ತನ ಪ್ರಶ್ನೆಗೆ ಉತ್ತರಿಸಿದ ಆರ್‌ಟಿಐ, ಚಿತ್ರದಲ್ಲಿರುವ ವ್ಯಕ್ತಿ ಮೋದಿ ಅಲ್ಲ, ಅದು ಫೋಟೋಶಾಪ್  ಮಾಡಿದ ಫೋಟೋ ಎಂದು ಉತ್ತರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com