ರೋಹಿತ ಆತ್ಮಹತ್ಯೆ ಕೇಸ್: 4 ದಲಿತ ವಿದ್ಯಾರ್ಥಿಗಳ ಅಮಾನತು ಆದೇಶ ಹಿಂಪಡೆದ ಹೈದರಾಬಾದ್ ವಿವಿ

ಆತ್ಮಹತ್ಯೆ ಮಾಡಿಕೊಂಡ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಜೊತೆ ಅಮಾನತುಗೊಂಡಿದ್ದ...
ಪ್ರತಿಭಟನಾನಿರತ ವಿದ್ಯಾರ್ಥಿಗಳು
ಪ್ರತಿಭಟನಾನಿರತ ವಿದ್ಯಾರ್ಥಿಗಳು
ಹೈದರಾಬಾದ್: ಆತ್ಮಹತ್ಯೆ ಮಾಡಿಕೊಂಡ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಜೊತೆ ಅಮಾನತುಗೊಂಡಿದ್ದ ನಾಲ್ವರು ದಲಿತ ಸಂಶೋಧನಾ ವಿದ್ಯಾರ್ಥಿಗಳ ಅಮಾನತು ಆದೇಶವನ್ನು ಗುರುವಾರ ವಿವಿ ಹಿಂಪಡೆದಿದೆ. 
ಸೊಂಥಾ ಪ್ರಶಾಂತ್, ಪೆಪಾಪುಡಿ ವಿಜಯಕುಮಾರ್, ಶೇಷಯ್ಯ ಚೆಮುಡುಗುಂಟ ಮತ್ತು ವೆಲ್​ಪುಲ ಸುಂಕಣ್ಣ ಈ ನಾಲ್ವರು ವಿದ್ಯಾರ್ಥಿಗಳಿಗೆ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡಿದ್ದರೂ, ವಸತಿಗೃಹ, ಗ್ರಂಥಾಲಯ, ಭೋಜನಾಲಯ ಮತ್ತು ವಿಶ್ವ ವಿದ್ಯಾಲಯದ ಇತರ ಸಾಮಾನ್ಯ ಪ್ರದೇಶಗಳಿಗೆ ಪ್ರವೇಶ ನಿರಾಕರಿಸಿ ವಿಶ್ವವಿದ್ಯಾಲಯ ಕಳೆದ ಡಿಸೆಂಬರ್​ನಲ್ಲಿ ಆದೇಶ ಹೊರಡಿಸಿತ್ತು. ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಶನ್​ಗೆ ಸೇರಿದ ಈ ನಾಲ್ವರು ಪಿಎಚ್​ಡಿ ವಿದ್ಯಾರ್ಥಿಗಳು ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಎಬಿವಿಪಿ ವಿದ್ಯಾರ್ಥಿ ನಾಯಕ ಸುಶೀಲ್ ಕುಮಾರ್ ದೂರು ನೀಡಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು.
ವೇಮುಲಾ ಪ್ರಕರಣದಲ್ಲಿ ತಪ್ಪು ಹೇಳಿಕೆ ನೀಡಿದ್ದಕ್ಕಾಗಿ ಇಡೀ ರಾಷ್ಟ್ರದ ಕ್ಷಮೆ ಕೇಳುವಂತೆ ಕೇಂದ್ರ ಮಾನವ ಸಂಪನ್ಮೂಲ ಇಲಾಖಾ ಸಚಿವೆ ಸ್ಮೃತಿ ಇರಾನಿ ಅವರನ್ನು ಆಗ್ರಹಿಸಿ, ವಿಶ್ವ ವಿದ್ಯಾಲಯ ಆವರಣಕ್ಕೆ ಭೇಟಿ ನೀಡಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಪ್ರಕಟಣೆ ಬಿಡುಗಡೆ ಮಾಡಿದ ಬೆನ್ನಲ್ಲೇ ‘ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ವಿದ್ಯಾರ್ಥಿಗಳಿಗೆ ವಿಧಿಸಲಾದ ಶಿಕ್ಷೆ ರದ್ದು ಪಡಿಸಲು ಎಕ್ಸಿಕ್ಯೂಟಿವ್ ಕೌನ್ಸಿಲ್ ನಿರ್ಧರಿಸಿದೆ ಎಂದು ಕೌನ್ಸಿಲ್ ಪ್ರಕಟಣೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com