ಸುಭಾಷ್ ಚಂದ್ರ ಬೋಸ್ ಅವರ ಅಣ್ಣ ಸರತ್ ಚಂದ್ರ ಬೋಸ್ ಅವರ ಪುತ್ರ ಅಮೀಯಾ ನಾಥ್ ಬೋಸ್, ಆಗಸ್ಟ್ 7, 1995ರಲ್ಲಿ ಆಗಿನ ಪ್ರಧಾನಿಯಾಗಿದ್ದ ಪಿವಿ ನರಸಿಂಹ ರಾವ್ ಅವರಿಗೆ ಪತ್ರವೊಂದನ್ನು ಬರೆದಿದ್ದರು. ಅದರಲ್ಲಿ, ನೇತಾಜಿಯವರ ಜತೆ ವಿಮಾನದಲ್ಲಿದ್ದ ಕರ್ನಲ್ ಹಬೀಬುರ್ ರೆಹ್ಮಾನ್ ಅವರು ಒಂದು ದಿನ ದೆಹಲಿಯ ಭಾಂಗಿ ಕಾಲನಿಯಲ್ಲಿ ಗಾಂಧೀಜಿಯವರನ್ನು ಭೇಟಿ ಮಾಡಿದ್ದರು. ಆ ವೇಳೆ ನಾನು ಅಲ್ಲಿ ನಾನೂ ಉಪಸ್ಥಿತನಿದ್ದೆ. ರೆಹ್ಮಾನ್ ಅವರು 18 ಆಗಸ್ಟ್ 1945ರಂದು ನಡೆದ ವಿಮಾನ ಅಪಘಾತದಲ್ಲಿ ನೇತಾಜಿ ಸಾವಿಗೀಡಾಗಿರುವ ಬಗ್ಗೆ ಮಾತನಾಡಿದ್ದರು.