ಬರಪೀಡಿತ ಬುಂದೇಲ್ ಖಂಡ್ ನಲ್ಲಿ ಪಾದಯಾತ್ರೆ ಮಾಡಲಿರುವ ರಾಹುಲ್ ಗಾಂಧಿ

ಉತ್ತರಪ್ರದೇಶದ ಬರಪೀಡಿತ ಬುಂದೇಲ್ ಖಂಡ್ ಪ್ರದೇಶದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪಾದಯಾತ್ರೆ ನಡೆಸಿ ಬರದಿಂದ ತೊಂದರೆಗೊಳಗಾದ ರೈತರನ್ನು
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
Updated on

ನವದೆಹಲಿ: ಉತ್ತರಪ್ರದೇಶದ ಬರಪೀಡಿತ ಬುಂದೇಲ್ ಖಂಡ್ ಪ್ರದೇಶದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪಾದಯಾತ್ರೆ ನಡೆಸಿ ಬರದಿಂದ ತೊಂದರೆಗೊಳಗಾದ ರೈತರನ್ನು ಭೇಟಿ ಮಾಡಲಿದ್ದಾರೆ.

"೨೩ ಜನವರಿ ಶನಿವಾರ ಈಗ ಬುಂದೇಲ್ ಖಂಡ್ ಗೆ ಭೇಟಿ ನೀಡುತ್ತಿದ್ದೇನೆ. ಮಹೋಬಾ ಜಿಲ್ಲೆಯಲ್ಲಿ ಕಿಸಾನ್ ಪಾದಯಾತ್ರೆ ನಡೆಸಿ ಬರಪೀಡಿತ ರೈತರನ್ನು ಮತ್ತು ಅವರ ಕುಟುಂಬದವರನ್ನು ಭೇಟಿ ಮಾಡಲಿದ್ದೇನೆ" ಎಂದು ಕಾಂಗ್ರೆಸ್ ಉಪಾಧ್ಯಕ್ಷ ಟ್ವೀಟ್ ಮಾಡಿದ್ದಾರೆ.

ರಸ್ತೆಯ ಮೂಲಕ ಬುಂದೇಲ್ ಖಂಡ್ ಪ್ರದೇಶದ ಮಹೋಬಾ ಜಿಲ್ಲೆಗೆ ಬರಲಿರುವ ರಾಹುಲ್ ೬ ಕಿಲೋ ಮೀಟರ್ ಗಳ ಪಾದಯಾತ್ರೆ ನಡೆಸಿ ಸೂಪಾ ಗ್ರಾಮದ ರೈತರನ್ನು ಭೇಟಿ ಮಾಡಲಿದ್ದಾರೆ.

ಸೂಪಾ ರೈಲ್ವೇ ನಿಲ್ದಾಣದ ಮಹಿಳಾ ಸ್ವಸಹಾಯ ಸಂಘದವರ ಜೊತೆ ಕೂಡ ಕಾಂಗ್ರೆಸ್ ಉಪಾಧ್ಯಕ್ಷ ಸಭೆ ನಡೆಸಲಿದ್ದಾರೆ.

೨೦೧೧ ರ ಜನಗಣತಿ ಪ್ರಕಾರ ೧೮.೩ ದಶಕಲಕ್ಷ ಜನ ವಾಸಿಸುವ ಬುಂದೇಲ್ ಖಂಡ್ ನಲ್ಲಿನ ಬರದಿಂದಾಗಿ ಹಲವಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆಲ್ಲ ಪರಿಹಾರ ನೀಡುವುದಾಗಿ ಉತ್ತರಪ್ರದೇಶ ಸರ್ಕಾರ ಘೋಷಿಸಿದ್ದರು, ಅದು ರೈತರಿಗಿನ್ನೂ ತಲುಪಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com