ಹೈದರಾಬಾದ್: ಹೈದರಾಬಾದ್ ವಿಶ್ವವಿದ್ಯಾಲಯದ ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಮಾಡಿಕೊಂಡದ್ದಕ್ಕೆ ತೀವ್ರ ವಿರೋಧದ ಮಧ್ಯೆ ಉಪಕುಲಪತಿ ಅಪ್ಪ ರಾವ್ ಉಪಕುಲಪತಿ ಹುದ್ದೆಯಿಂದ ಬದಿಗೆ ಸರಿದಿದ್ದು, ಇನ್ನೂ ಹೆಚ್ಚಿನ ಪ್ರತಿಭಟನೆಗಳಿಗೆ ಎಡೆಮಾಡಿಕೊಡಬಹುದಾದ ನಡೆಯಲ್ಲಿ ದಲಿತ ವಿದ್ಯಾರ್ಥಿಗಳನ್ನು ವಿದ್ಯಾರ್ಥಿ ನಿಲಯದಿಂದ ಉಚ್ಛಾಟಿಸಲು ಶಿಫಾರಸ್ಸು ಮಾಡಿದ್ದ ಸಮಿತಿಯ ಅಧ್ಯಕ್ಷತೆ ವಹಿಸಿದ್ದ ವ್ಯಕ್ತಿ ಉಪಕುಲಪತಿ ಹುದ್ದೆಯನ್ನು ಅಲಂಕರಿಸಿದ್ದಾರೆ.