ಭೋಜನಕೂಟದಲ್ಲಿ ಐಶ್ವರ್ಯ - ಚಿತ್ರ (Twitter (@MITTHUAISH)
ಭೋಜನಕೂಟದಲ್ಲಿ ಐಶ್ವರ್ಯ - ಚಿತ್ರ (Twitter (@MITTHUAISH)

ಫ್ರೆಂಚ್ ಅಧ್ಯಕ್ಷ ಹೊಲಾಂಡೆ ಭೋಜನಕೂಟದಲ್ಲಿ ಮಿಂಚಿದ ಐಶ್

67ನೇ ಗಣರಾಜ್ಯೋತ್ಸವದ ಮುಖ್ಯ ಅತಿಥಿ ಫ್ರೆಂಚ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ ಅವರಿಗಾಗಿ ಮಂಗಳವಾರ ಏರ್ಪಡಿಸಲಾಗಿದ್ದ ವಿಶೇಷ ಭೋಜನಕೂಟದಲ್ಲಿ...
Published on
ನವದೆಹಲಿ: 67ನೇ ಗಣರಾಜ್ಯೋತ್ಸವದ ಮುಖ್ಯ ಅತಿಥಿ ಫ್ರೆಂಚ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ ಅವರಿಗಾಗಿ ಮಂಗಳವಾರ ಏರ್ಪಡಿಸಲಾಗಿದ್ದ ವಿಶೇಷ ಭೋಜನಕೂಟದಲ್ಲಿ ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಅವರು ಕೆಂಪು ಬನಾರಸ್ ರೇಷ್ಮೆ ಸೀರೆಯಲ್ಲಿ ಮಿಂಚಿದರು.
ತಮ್ಮ ಮುಂದಿನ ಚಿತ್ರ ‘ಸರಬ್​ಜಿತ್’ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದ ಐಶ್ವರ್ಯ ರೈ ಅವರು ಬಿಡುವು ಮಾಡಿಕೊಂಡು ಹೊಲಾಂಡೆ ಭೋಜನಕೂಟಕ್ಕೆ ಆಗಮಿಸಿದರು. ಫ್ರೆಂಚ್ ರಾಯಭಾರಿ ಫ್ರಾಂಕೋಯಿಸ್ ರಿಚಿಯರ್ ಅವರು ಈ ಭೋಜನಕೂಟದ ವ್ಯವಸ್ಥೆ ಮಾಡಿದ್ದರು.
ರಾಜಪಥದಲ್ಲಿ ನಡೆದ ರಾಷ್ಟ್ರದ ವರ್ಣರಂಜಿತ ಗಣರಾಜ್ಯೋತ್ಸವ ಪೆರೇಡ್​ನಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡ ಹೊಲಾಂಡೆ ಅವರಿಗೆ ಏರ್ಪಡಿಸಲಾದ ವಿಶೇಷ ಭೋಜನ ಕೂಟಕ್ಕೆ ಆಗಮಿಸುವಂತೆ ರಿಚಿ ಅವರು 42ರ ಹರೆಯದ ಚಿತ್ರನಟಿಗೆ ಆಹ್ವಾನ ನೀಡಿದ್ದರು.
ಭೋಜನ ಕೂಟದಲ್ಲಿ ಮಿಂಚುತ್ತಿದ್ದ ಐಶ್ವರ್ಯ ರೈ ಅವರ ಚಿತ್ರವನ್ನು ಆಕೆಯ ಸಿನಿ ಪ್ರಚಾರಕರು ವೆಬ್​ಸೈಟ್​ನಲ್ಲಿ ಪ್ರಕಟಿಸಿದ್ದು, ರೈ ಅವರು ಜನತೆಗೆ ಗಣರಾಜ್ಯೋತ್ಸವ ಶುಭಾಷಯಗಳನ್ನು ಹಾರೈಸಿದ್ದಾರೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com